Connect with us

ಪ್ರವಾಸಕ್ಕೆ ತೆರಳಿದ್ದಾಗ ಲವ್- ಬಾಲ್ಯವಿವಾಹ ನಿರಾಕರಿಸಿ ಪ್ರಿಯಕರನ ಕೈ ಹಿಡಿದ ಯುವತಿ

ಪ್ರವಾಸಕ್ಕೆ ತೆರಳಿದ್ದಾಗ ಲವ್- ಬಾಲ್ಯವಿವಾಹ ನಿರಾಕರಿಸಿ ಪ್ರಿಯಕರನ ಕೈ ಹಿಡಿದ ಯುವತಿ

– ಮಗಳನ್ನ ಕಳಿಸಿಕೊಡಿ ಎಂದು ಯುವಕನ ಕಾಲಿಗೆ ಬಿದ್ದ ತಂದೆ
– ತುಮಕೂರಿನಿಂದ ಬಾಗಲಕೋಟೆಗೆ ಬಂದು ಮದ್ವೆ

ಬಾಗಲಕೋಟೆ: ಬಾಲ್ಯವಿವಾಹ ನಿರಾಕರಿಸಿದ ತುಮಕೂರಿನ ಯುವತಿ ಬಾಗಲಕೋಟೆಗೆ ಬಂದು ಪ್ರಿಯಕರನನ್ನು ಮದುವೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಇಂದು ಜೋಡಿ ನವನಗರದ ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ.

ಆಕಾಶ್ ಮತ್ತು ಐಶ್ವರ್ಯಾ ಪ್ರೀತಿಸಿ ಮದುವೆಯಾದ ಜೋಡಿ. ಐಶ್ವರ್ಯಾ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಳ್ಳಿ ಗ್ರಾಮದ ನಿವಾಸಿ. ಆಕಾಶ್ ಬಾಗಲಕೋಟೆಯ ನವನಗರದ ನಿವಾಸಿ. 2016ರಲ್ಲಿ ಪ್ರವಾಸಕ್ಕೆ ತೆರಳಿದ್ದಾಗ ಚಿತ್ರದುರ್ಗದಲ್ಲಿ ಇಬ್ಬರ ಪರಿಚಯವಾಗಿದೆ. ಪ್ರವಾಸದ ವೇಳೆ ಇಬ್ಬರು ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದಾರೆ. 2017ರಲ್ಲಿ ಐಶ್ವರ್ಯಾಗೆ 17 ವರ್ಷವಿದ್ದಾಗ ಕುಟುಂಬಸ್ಥರು ಮದುವೆ ಮಾಡಿದ್ದಾರೆ.

ಮದುವೆಯಾಗಿ ಗಂಡನ ಮನೆ ಸೇರಿದ್ದ ಐಶ್ವರ್ಯಾ ನಿರಂತರವಾಗಿ ಆಕಾಶ್ ಸಂಪರ್ಕದಲ್ಲಿದ್ದಳು. ಕೊನೆಗೆ ಬಾಲ್ಯವಿವಾಹ ತನಗೆ ಇಷ್ಟವಿರಲಿಲ್ಲ ಎಂದು ಎರಡು ದಿನಗಳ ಹಿಂದೆ ಐಶ್ವರ್ಯಾ ಬಾಗಲಕೋಟೆಗೆ ಬಂದಿದ್ಳು. ಇತ್ತ ಐಶ್ವರ್ಯಾ ತಂದೆ ಮತ್ತು ಸೋದರ ಸಹ ಬಾಗಲಕೋಟೆಗೆ ಆಗಮಿಸಿದ್ದಾರೆ. ಆದ್ರೆ ಇಂದು ಆಕಾಶ್ ಮತ್ತು ಐಶ್ವರ್ಯ ತಮ್ಮ ಜೀವಕ್ಕೆ ಅಪಾಯವಿದ್ದು, ರಕ್ಷಣೆ ನೀಡಿ ಎಂದು ಬಾಗಲಕೋಟೆ ಎಸ್‍ಪಿ ಕಚೇರಿಗೆ ಆಗಮಿಸಿದ್ದರು.

ಎಸ್‍ಪಿ ಕಚೇರಿಯ ಆವರಣದಲ್ಲಿ ಮಗಳನ್ನ ನೋಡಿದ ತಂದೆ, ಯುವಕ ಆಕಾಶ್ ಕಾಲಿಗೆ ಬಿದ್ದು ಆಕೆಯನ್ನ ಕಳಿಸಿಕೊಡಿ ಎಂದು ಕಣ್ಣೀರು ಹಾಕಿದರು. ಸೋದರ ಸಹ ತಂದೆಯನ್ನ ತಬ್ಬಿಕೊಂಡು ಕಣ್ಣೀರಿಡುತ್ತಿದ್ರೆ, ಇತ್ತ ಐಶ್ವರ್ಯ ಸಹ ಕಣ್ಣೀರು ಹಾಕುತ್ತಲೇ ಆಕಾಶ ಜೊತೆ ಹೋಗಿದ್ದಾಳೆ.

ಐಶ್ವರ್ಯಾ ಜೊತೆ ಆಕಾಶ್ ಕುಟುಂಬಸ್ಥರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಗೆಳೆಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ. ಆಕಾಶ್ ಹಾಗೂ ಐಶ್ವರ್ಯ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು.

Advertisement
Advertisement