Crime
ನಿಂತಿದ್ದ ಕಂಟೇನರ್ಗೆ ಲಾರಿ ಡಿಕ್ಕಿ – ರಸ್ತೆ ಪಾಲಾದ ಲಕ್ಷಾಂತರ ಮೊಟ್ಟೆಗಳು

ಹುಬ್ಬಳ್ಳಿ: ಕೋಳಿ ಮೊಟ್ಟೆಗಳನ್ನು ಸಾಗಿಸುತ್ತಿದ್ದ ಕಂಟೇನರ್ ವಾಹನಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ನಲ್ಲಿದ್ದ ಲಕ್ಷಾಂತರ ಮೊಟ್ಟೆಗಳು ರಸ್ತೆ ಪಾಲಾದ ಘಟನೆಯೊಂದು ನಡೆದಿದೆ. ಹುಬ್ಬಳ್ಳಿ ಹೊರವಲಯದ ಐಟಿಸಿ ಗೋಡೌನ್ ಬಳಿ ನಸುಕಿನ ಜಾವ ಸಂಭವಿಸಿದ ಅಪಘಾತದಲ್ಲಿ ಲಕ್ಷಾಂತರ ಮೊಟ್ಟೆಗಳು ರಸ್ತೆ ಪಾಲಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಗದಗದಿಂದ ಕುಮಟಾ ಪಟ್ಟಣಕ್ಕೆ ಮೊಟ್ಟೆಯನ್ನು ಸಾಗಿಸುತ್ತಿದ್ದ ಕಂಟೇನರ್ ವಾಹನ ಹುಬ್ಬಳ್ಳಿ ಹೊರವಲಯದ ಐಟಿಸಿ ಗೋದಾಮು ಹತ್ತಿರ ರಸ್ತೆ ಬಂದಿ ನಿಂತ ವೇಳೆ ಈ ಅಪಘಾತ ಸಂಭವಿಸಿದೆ. ನಿಂತಿದ್ದ ಕಂಟೇನರ್ಗೆ ಅದಿರು ತುಂಬಿಕೊಂಡು ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ವಾಹನ ಉರುಳಿ ಬಿದ್ದಿದ್ದು, ಕಂಟೇನರನಲ್ಲಿದ್ದ ಮೊಟ್ಟೆಗಳು ರಸ್ತೆ ಪಾಲಾಗಿವೆ.
ಅಪಘಾತದಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಕಂಟೇನರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಿದ್ದಾರೆ. ಈ ಘಟನೆಯ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
