Sunday, 25th August 2019

Recent News

ಪಲ್ಟಿ ಹೊಡೆದು 60 ಅಡಿ ಆಳಕ್ಕೆ ಬಿದ್ದ 50 ಜನರಿದ್ದ ಟ್ರಕ್

ಭುವನೇಶ್ವರ: ಓರಿಸ್ಸಾ ರಾಜ್ಯದ ಕಂಧಮಾಲಾ ಜಿಲ್ಲೆಯ ಬಾಲಿಗುಡಾ ಎಂಬಲ್ಲಿ 50 ಜನರು ಹೊತ್ತು ಸಾಗುತ್ತಿದ್ದ ಟ್ರಕ್ ಪಲ್ಟಿ ಹೊಡೆದು 60 ಅಡಿ ಆಳಕ್ಕೆ ಬಿದ್ದಿದೆ.

ಘಟನೆಯಲ್ಲಿ 8 ಜನರು ಮೃತಪಟ್ಟಿದ್ದು, 25ಕ್ಕೂ ಹೆಚ್ಚಿನ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಹಲವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಬೆರಹಮಪುರ ನಗರದ ಕೃಷ್ಣಚಂದ ಗಜಪತಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಲುಮಾ ಕ್ಷೇತ್ರದ ಸುಮಾರು 50 ಜನರು ಚರ್ಚ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗದಾಪುರದಿಂದ ಬ್ರಾಹ್ಮಿಣಿ ಗ್ರಾಮಕ್ಕೆ ತೆರಳುತ್ತಿದ್ದರು. ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ನವೀನ್ ಪಟ್ನಾಯಕ್, ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *