ಬೆಂಗಳೂರು: ಕುಡಿದು ಅಡ್ಡಾದಿಡ್ಡಿ ತ್ರಿಬಲ್ ರೈಡಿಂಗ್ ಮಾಡಿದ ಪರಿಣಾಮ ಬುಲೆಟ್ ಬೈಕ್ ಓಡಿಸುತ್ತಿದ್ದ ಸವಾರರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೆಬ್ಬಾಳದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
Advertisement
ತ್ರಿಬಲ್ ರೈಡಿಂಗ್ ಮಾಡುತ್ತ ಮೇಕ್ರಿ ಸರ್ಕಲ್ ಕಡೆಯಿಂದ ಏರ್ಪೋರ್ಟ್ ರಸ್ತೆ ಕಡೆ ಹೋಗುತ್ತಿದ್ದ ಬುಲೆಟ್ ಸವಾರರು ಮುಂದೆ ಹೋಗುತ್ತಿದ್ದ ಕ್ಯಾಂಟರ್ ಗೆ ಚಮಕ್ ಕೊಡೋಕೆ ಹೋಗಿ ನಿಯಂತ್ರಣ ತಪ್ಪಿ ಕ್ಯಾಂಟರ್ ಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಬುಲೆಟ್ ನಲ್ಲಿದ್ದ ಇಬ್ಬರು ನಡುರಸ್ತೆಯಲ್ಲೇ ಕೆಳಗೆ ಬಿದ್ದರೆ ಬೈಕ್ ಓಡಿಸುತ್ತಿದ್ದ ಯುವಕ ರಸ್ತೆ ಬದಿಯ ಡಿವೈಡರ್ ಗೆ ರಭಸದಿಂದ ಡಿಕ್ಕಿ ಹೊಡೆದಿದ್ದಾನೆ.
Advertisement
Advertisement
ಪರಿಣಾಮ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಗಾಯಗೊಂಡವರನ್ನ ಹತ್ತಿರದಲ್ಲೇ ಇರುವ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಸುದ್ದಿ ತಿಳಿಯುತ್ತಿದಂತೆಯೇ ಸ್ಥಳಕ್ಕೆ ದೌಡಾಯಿಸಿದ ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.