ಕೊಲೆ ಮಾಡಿ ಆಟೋದಲ್ಲೇ ಶವ ಬಿಟ್ಟು ಪರಾರಿ – ಸ್ನೇಹಿತರು ಅರೆಸ್ಟ್

Advertisements

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಂಗಳಮುಖಿ ವಿಜಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisements

ವಿಜಯಾ (28) ಕೊಲೆಯಾದ ಮಂಗಳಮುಖಿ. ಅರುಣ್ ಮತ್ತು ಶಿವು ಬಂಧಿತ ಆರೋಪಿಗಳು. ಸುಬ್ರಮಣ್ಯಪುರ ಇನ್ಸ್‌ಪೆಕ್ಟರ್ ಪರಮೇಶ್ ನೇತೃತ್ವದ ತಂಡದಿಂದ ಆರೋಪಿಗಳನ್ನು ಬಂಧಿಸಲಾಗಿದೆ.

Advertisements

ಎರಡು ದಿನಗಳ ಹಿಂದೆ ಮನೆಯಲ್ಲಿ ಮೃತ ವಿಜಯಾ ಮತ್ತು ಆರೋಪಿಗಳು ಕಿತ್ತಾಡಿಕೊಂಡಿದ್ದರು. ಗಲಾಟೆಯಾದಾಗ ಕೋಪಗೊಂಡ ಅರುಣ್, ಮೃತ ವಿಜಯಾ ಕುತ್ತಿಗೆಗೆ ಆಯುಧದಿಂದ ಇರಿದಿದ್ದನು. ನಂತರ ತಾನೇ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದ. ಆದರೆ ಮಾರ್ಗ ಮಧ್ಯೆ ಕುಮಾರಸ್ವಾಮಿ ಲೇಔಟ್ ಬಳಿ ವಿಜಯಾ ಮೃತಪಟ್ಟಿದ್ದಳು. ನಂತರ ಆಟೋದಲ್ಲೇ ಶವ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಹಣಕಾಸು ವಿಚಾರಕ್ಕೆ ಗಲಾಟೆ ನಡೆದಿತ್ತು ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisements
Exit mobile version