Wednesday, 22nd January 2020

Recent News

ಟ್ರಾಯ್ ಅಧ್ಯಕ್ಷರಿಂದ ಆಧಾರ್ ಚಾಲೆಂಜ್: ವೈಯಕ್ತಿಕ ಮಾಹಿತಿ ಆನ್‍ಲೈನಲ್ಲಿ ಪ್ರಕಟ

ನವದೆಹಲಿ: ಆಧಾರ್ ಭದ್ರತಾ ವಿಚಾರದ ಬಗ್ಗೆ ಪರ, ವಿರೋಧ ಚರ್ಚೆ ಆಗುತ್ತಿದ್ದಂತೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಅಧ್ಯಕ್ಷ ಆರ್‌ಎಸ್ ಶರ್ಮಾ ಅವರ ವೈಯಕ್ತಿಕ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದೆ.

 ಆರ್‌ಎಸ್ ಶರ್ಮಾ  ಅವರು ಶನಿವಾರ ಮಧ್ಯಾಹ್ನ 1.44ಕ್ಕೆ ತನ್ನ ಆಧಾರ್ ನಂಬರ್ ಅನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿ ನನ್ನ ವೈಯಕ್ತಿಕ ಮಾಹಿತಿಯನ್ನು ಹೇಗೆ ದುರ್ಬಳಕೆ ಮಾಡುತ್ತಿರಿ ಎಂದು ಬರೆದು ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಫ್ರಾನ್ಸ್ ಇಲಿಯಟ್ ಆಂಡರ್ ಸನ್ ಖಾತೆ ಸಂಜೆ 5.55 ರಿಂದ ಸರಣಿ ಟ್ವೀಟ್ ಮಾಡಿ ಆರ್‍ಎಸ್ ಶರ್ಮಾ ಅವರ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಮಾಡಿದೆ.

 

 

 

ಏನೆಲ್ಲ ಮಾಹಿತಿ ಪ್ರಕಟವಾಗಿದೆ?
ಆರ್‌ಎಸ್ ಶರ್ಮಾ ಅವರ ಫೋನ್ ನಂಬರ್, ಐಫೋನ್ ಬಳಸುತ್ತಿರುವ ಮಾಹಿತಿ, ವಾಟ್ಸಪ್ ಪ್ರೊಫೈಲ್ ಫೋಟೋ, ಪಾನ್ ನಂಬರ್ ಪ್ರಕಟವಾಗಿದೆ. ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ. ವಾಟ್ಸಪ್ ಪ್ರೊಫೈಲ್ ಫೋಟೋ ಸೆಟ್ಟಿಂಗ್ಸ್ ‘ಪಬ್ಲಿಕ್’ ಆಗಿದೆ ಎನ್ನುವ ಮಾಹಿತಿಯನ್ನು ಇಲಿಯಟ್ ಆಂಡರ್ ಸನ್ ಪ್ರಕಟಿಸಿದೆ. ಅಷ್ಟೇ ಅಲ್ಲದೇ ಹುಟ್ಟಿದ ದಿನಾಂಕ ಮತ್ತು ಇನ್ನೊಂದು ಮೊಬೈಲ್ ನಂಬರ್ ಪಡೆಯಬಹುದು ಎಂದು ತಿಳಿಸಿದೆ. ಎಲ್ಲ ಮಾಹಿತಿಗಳನ್ನು ಪ್ರಕಟಿಸಿದ ಬಳಿಕ ಇಲ್ಲಿಗೆ ನಾನು ಈ ವಿವರ ನೀಡುವುದನ್ನು ನಿಲ್ಲಿಸುತ್ತೇನೆ. ಅಷ್ಟೇ ಅಲ್ಲದೇ ಆಧಾರ್ ಮಾಹಿತಿಯನ್ನು ಸಾರ್ವಜನಿಕವಾಗಿ ಸೋರಿಕೆ ಮಾಡುವುದು ಸರಿಯಲ್ಲ ಎಂದು ಖಾತೆ ಬರೆದುಕೊಂಡಿದೆ.

ಮಾಧ್ಯಮಗಳಲ್ಲಿ ಆರ್‍ಕೆ ಶರ್ಮಾ ಅವರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಆಧಾರ್ ನಂಬರ್ ಬಳಸಿ ನನಗೆ ಹೇಗೆ ತೊಂದರೆ ಕೊಡಬಹುದು ಎನ್ನುವುದನ್ನು ತಿಳಿಯಲು ನಾನು ಮಾಹಿತಿ ಪ್ರಕಟಿಸಿದ್ದೆ ಎಂದು ಬರೆದುಕೊಂಡಿದೆ. ಆಧಾರ್ ನಂಬರ್ ಸೋರಿಕೆಯಾಗಿಲ್ಲ ಎಂದು ತಿಳಿಸಿದರು.

ಇಲಿಯಟ್ ಆಂಡರ್ ಸನ್ ಖಾತೆ ಪ್ರಕಟಿಸಿದ ಮಾಹಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಆರ್‌ಎಸ್ ಶರ್ಮಾ ಅವರು ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆ. ಹೀಗಾಗಿ ಇಲಿಯಟ್ ಆಂಡರ್ ಸನ್ ಪ್ರಕಟಿಸಿದ ಮಾಹಿತಿ ಎಲ್ಲವೂ ಸರ್ಕಾರಿ ವೆಬ್‍ಸೈಟಿನಲ್ಲಿ ಸುಲಭವಾಗಿ ಲಭ್ಯವಿದೆ. ಈ ಮಾಹಿತಿಗಳನ್ನು ಹ್ಯಾಕ್ ಮಾಡುವ ಅಗತ್ಯವೇ ಇಲ್ಲ ಎಂದು ಬರೆದು ಸರ್ಕಾರಿ ವೆಬ್‍ಸೈಟ್ ನಲ್ಲಿ ಶರ್ಮಾ ಅವರ ವಿವರಕ್ಕೆ ಸಂಬಂಧಿಸಿದ ಮಾಹಿತಿಗಳ ಸ್ಕ್ರೀನ್ ಶಾಟ್ ಅಪ್ಲೋಡ್ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *