Connect with us

Bengaluru City

ರಸ್ತೆಗಿಳಿದ ರವಿ ಚೆನ್ನಣ್ಣನವರ್- 100ಕ್ಕೂ ಹೆಚ್ಚು ವಾಹನಗಳು ಸೀಜ್

Published

on

– ಇನ್ನೂ ಹಲವರಿಗೆ ದಂಡ, ಎಚ್ಚರಿಕೆ

ಬೆಂಗಳೂರು: ಸಿಲಿಕಾನ್ ಸಿಟಿ ಜೊತೆಗೆ ಹೊರವಲಯದ ನೆಲಮಂಗಲದಲ್ಲಿ ಸಹ ಸಾಕಷ್ಟು ವಾಹನ ದಟ್ಟಣೆಯಾಗುತ್ತಿದೆ. ಆದರೆ ಜನ ಮಾತ್ರ ಸಂಚಾರಿ ನಿಯಮ ಪಾಲಿಸುತ್ತಿಲ್ಲ. ಹೀಗಾಘಿ ಸ್ವತಃ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ರಸ್ತೆಗಿಳಿದು ವಾಹನಗಳ ಪರಿಶೀಲನೆ ನಡೆಸಿದ್ದಾರೆ.

ಕೋವಿಡ್-19 ಹಿನ್ನಲೆಯಲ್ಲಿ ವಾಹನ ಸವಾರರು ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ, ಕೊರೊನಾ ನಿಯಮ ಪಾಲಿಸದೆ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದು, ಹೀಗಾಗಿ ಎಸ್‍ಪಿ ರವಿ.ಡಿ.ಚೆನ್ನಣ್ಣವರ್ ಸ್ವತಃ ವಾಹನಗನ್ನು ತಪಾಸಣೆ ಮಾಡಿದರು. ರವಿ ಚೆನ್ನಣ್ಣವರ್ ಇಂದು 100ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದು, ಸಂಚಾರಿ ನಿಯಮ ಪಾಲಿಸದೆ ಹೆಲ್ಮೆಟ್, ಮಾಸ್ಕ್ ಇಲ್ಲದೆ ಬೇಕಾಬಿಟ್ಟಿ ಸಂಚರಿಸುವವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಜಾಗೃತಿ ಮೂಡಿಸಿದರು.

ನೆಲಮಂಗಲ ಟೌನ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ವಾಹನ ಸವಾರರಿಗೆ ಸಂಚಾರಿ ನಿಯಮದ ಪಾಠ ಹೇಳಿದರು. ಟ್ರಾಫಿಕ್ ನಿಯಮ ಪಾಲಿಸುವಂತೆ ಹೇಳಿ, ದಂಡ ಹಾಕಿ ಸವಾರರಿಗೆ ಚುರುಕು ಮುಟ್ಟಿಸಿದ್ದಾರೆ. ಈ ವೇಳೆ ಡಿವೈಎಸ್ ಪಿ ಮೋಹನ್ ಕುಮಾರ್, ಸಿಪಿಐ ಶಿವಣ್ಣ, ಸಂಚಾರಿ ಸಿಪಿಐ ವೀರೇಂದ್ರ ಪ್ರಸಾದ್, ಪಿಎಸ್‍ಐ ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.

Click to comment

Leave a Reply

Your email address will not be published. Required fields are marked *