Connect with us

ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕ- ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಪಾರು

ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕ- ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಪಾರು

ದಾವಣಗೆರೆ: ಜಾತ್ರೆಗೆ ಹೋಗುತ್ತಿರುವಾಗ ಟ್ರ್ಯಾಕ್ಟರ್ ಮಗುಚಿದ್ದು, ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿದ್ದ ಚಾಲಕನ ಜೀವ ಉಳಿಸಲಾಗಿದೆ.

ಜಿಲ್ಲೆಯ ಹರಿಹರ ತಾಲೂಕಿನ ಇಂಗಳಗುಂದಿ ಬಳಿ ಘಟನೆ ನಡೆದಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಚಾಲಕ ಪಾರಾಗಿದ್ದಾನೆ. ಇಂಗಳಗುಂದಿಯಿಂದ ಹುಲಿಗಿನಹೊಳೆಯ ಬಸವೇಶ್ವರ ಜಾತ್ರೆಗೆ ಯುವಕ ಹೊರಟಿದ್ದ. ಈ ವೇಳೆ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದು, ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಉರುಳಿತ್ತು. ಚಾಲಕ ಇಂಜಿನ್ ಅಡಿ ಸಿಲುಕಿ ನರಳುತ್ತಿದ್ದ.

ಇದನ್ನು ಗಮನಿಸಿದ ಅಲ್ಲೇ ಇದ್ದ ಕೆಲ ಗ್ರಾಮಸ್ಥರು, ಟ್ರ್ಯಾಕ್ಟರ್ ಇಂಜಿನ್ ಅಡಿ ಸಿಲುಕಿ ಸಾವು ಬದುಕಿನ ಮಧ್ಯೆ ಚಾಲಕನನ್ನು ಅರ್ಧಗಂಟೆಗೂ ಅಧಿಕ ಕಾಲ ಸಾಹಸಪಟ್ಟು, ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್ ಮೇಲೆತ್ತಿ ರಕ್ಷಿಸಿದ್ದಾರೆ. ಬಳಿಕ ಟ್ರ್ಯಾಕ್ಟರ್ ಅಡಿ ಸಿಲುಕಿದ್ದ ಚಾಲಕ ಹೊರ ಬಂದಿದ್ದು, ಗ್ರಾಮಸ್ಥರೇ ಪ್ರಥಮ ಚಿಕಿತ್ಸೆ ನೀಡಿದರು. ಚಾಲಕನನ್ನು ಇಂಗಳಗುಂದಿ ಗ್ರಾಮದ ಯೋಗೇಶ್ ಎಂದು ಗುರುತಿಸಲಾಗಿದ್ದು, ಹರಿಹರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement