ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭ – ಒಂದೇ ತಿಂಗಳಲ್ಲಿ ಬರೋಬ್ಬರಿ 600 ವಾಹನಗಳ ಎತ್ತಂಗಡಿ

By
1 Min Read

ಬೆಂಗಳೂರು: ನಾಲ್ಕು ವರ್ಷದ ಬಳಿಕ ಬೆಂಗಳೂರಿನಲ್ಲಿ (Bengaluru) ಮತ್ತೆ ಟೋಯಿಂಗ್‌ (Towing) ಆರಂಭವಾಗಿದೆ. ಇದೀಗ ಒಂದೇ ತಿಂಗಳಲ್ಲಿ ಬರೋಬ್ಬರಿ 600 ವಾಹನಗಳನ್ನು ಟೋಯಿಂಗ್‌ ಮಾಡಿದ್ದಾರೆ.

ತಿಂಗಳ ಹಿಂದೆ ನಗರದ ಮೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಟೋಯಿಂಗ್ ಆರಂಭ ಮಾಡಲಾಗಿತ್ತು. ನೋ ಪಾರ್ಕಿಂಗ್, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕ್‌ ಮಾಡಿರುವ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ. ಪ್ರತಿದಿನ 60 ರಿಂದ 70 ವಾಹನಗಳ ಟೋಯಿಂಗ್ ಮಾಡುತ್ತಿದ್ದು, ಒಂದೇ ತಿಂಗಳಲ್ಲಿ ಬರೋಬ್ಬರಿ 600 ವಾಹನಗಳನ್ನು ಟೋಯಿಂಗ್ ಮಾಡಿ, ದಂಡ ವಿಧಿಸಲಾಗಿದೆ. ಇದನ್ನೂ ಓದಿ: ರಾಯಚೂರು | ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಸದ್ಯ ಮೂರು ಪಾಲಿಕೆಯಲ್ಲಿ ಮಾತ್ರ ಟೋಯಿಂಗ್ ಮಾಡಲಾಗುತ್ತಿದ್ದು, ಇನ್ನೂ ಎರಡು ಪಾಲಿಕೆ ವ್ಯಾಪ್ತಿಯಲ್ಲಿ ಟೋಯಿಂಗ್ ಆರಂಭಿಸಬೇಕಿದೆ. ಈವರೆಗೆ ಯಾವುದೇ ತಾಂತ್ರಿಕ ಸಮಸ್ಯೆ ಬಗ್ಗೆ ವರದಿಯಾಗಿಲ್ಲ. ಪೊಲೀಸರು ಮತ್ತು ಜಿಬಿಎ ಸಿಬ್ಬಂದಿ ಜಂಟಿಯಾಗಿ ಟೋಯಿಂಗ್ ಮಾಡುತ್ತಿದ್ದಾರೆ.

Share This Article
Exit mobile version