Connect with us

Chikkamagaluru

ಬ್ರೇಕ್ ಫೇಲಾಗಿ ಕಾಫಿ ತೋಟಕ್ಕೆ ನುಗ್ಗಿದ ಕಾರು – ತಪ್ಪಿದ ಅನಾಹುತ

Published

on

ಚಿಕ್ಕಮಗಳೂರು: ಪ್ರವಾಸಕ್ಕೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಪ್ರವಾಸಿಗರ ಮಹೀಂದ್ರಾ ಎಕ್ಸ್‍ಯುವಿ 500 ಕಾರು ಬ್ರೇಕ್ ಫೇಲಾಗಿ ಕಾಫಿ ತೋಟಕ್ಕೆ ನುಗ್ಗಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳಗುಪ್ಪೆ ಗ್ರಾಮದ ಬಳಿ ನಡೆದಿದೆ.

ಘಟನೆ ವೇಳೆ ಅದೃಷ್ಟವಶಾತ್ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಆರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಫಿ ತೋಟಕ್ಕೆ ನುಗ್ಗಿದ ಕಾರು ಸಿನಿಮೀಯ ರೀತಿಯಲ್ಲಿ ಗಿಡಗಳ ಮಧ್ಯೆ ಸಿಲುಕಿ ಮುಂಭಾಗ ನೆಲಕ್ಕೆ ಹೂತುಕೊಂಡಂತೆ ನಿಂತಿದೆ. ಘಟನೆಯಲ್ಲಿ ಚಾಲಕ ಹಾಗೂ ಪ್ರವಾಸಿಗರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ನಿಯಂತ್ರಣ ಕಳೆದುಕೊಂಡ ಕಾರು ಗಿಡಗಳ ಮಧ್ಯೆ ನೆಲಕ್ಕೆ ಹೂತುಕೊಂಡಂತೆ ನಿಂತುಕೊಂಡ ಪರಿಣಾಮ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದ್ದು, ಒಂದೊಮ್ಮೆ ಕಾರು ತೋಟದೊಳಗೆ ಪಲ್ಟಿಯಾಗಿ ಉರುಳಿ ಹೋಗಿದ್ದರೆ ಬಹುದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv