Thursday, 17th October 2019

ಹೊತ್ತಿ ಉರಿದ ಪ್ರವಾಸಿ ಬಸ್- ತಪ್ಪಿದ ಭಾರೀ ದುರಂತ

ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿಯ ಗಣಂಗೂರು ಬಳಿ ಖಾಸಗಿ ಬಸ್ ಹೊತ್ತಿ ಉರಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರುನಲ್ಲಿ ಬಸ್ ಬೆಂಕಿಗಾಹುತಿಯಾಗಿದೆ.

ಕೇರಳ ಮೂಲದ ಪ್ರವಾಸಿ ಬಸ್ ಇದಾಗಿದ್ದು, ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಪ್ರವಾಸಿಗರು ಬಸ್ ನಿಂದ ಹೊರ ಬಂದಿದ್ದಾರೆ. ಪ್ರವಾಸಿಗರು ಬಸ್ ನಿಂದ ಹೊರ ಬಂದ ಕೆಲವೇ ಕ್ಷಣಗಳಲ್ಲಿ ಧಗ ಧಗನೇ ಹೊತ್ತಿ ಉರಿದಿದೆ. ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಯಾಕೆ ಎಂಬುವುದು ತಿಳಿದು ಬಂದಿಲ್ಲ.

ಇಂದು ಬೆಳಗಿನ ಜಾವ ಐದು ಗಂಟೆಗೆ ಅವಘಡ ಸಂಭವಿಸಿದ್ದು, ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *