Connect with us

Bengaluru City

ಚಳಿ ಎಫೆಕ್ಟ್‌ಗೆ ದಿಢೀರ್ ಗಗನಕ್ಕೇರಿದೆ ಟೊಮೆಟೋ ಬೆಲೆ..!

Published

on

ಬೆಂಗಳೂರು: ಗ್ಯಾಸ್ ಇಳಿಕೆಯಾದ ಖುಷಿಯಲ್ಲಿದ್ದ ಗೃಹಿಣಿಯರಿಗೆ ಟೊಮೆಟೋ ಹುಳಿ ಶಾಕ್ ನೀಡಿದೆ. ಕೆಜಿಗೆ 10 ರೂಪಾಯಿ 20 ರೂಪಾಯಿ ಇದ್ದ ಟಮ್ಯಾಟೋ ದರ ಏಕಾಏಕಿ 70 ರೂಪಾಯಿಗೆ ಏರಿಕೆಯಾಗಿದೆ.

ಹೌದು, ಈ ಬಾರಿ ಚಳಿಗಾಲ ರೈತ ಮೊಗದಲ್ಲಿ ಮಂದಹಾಸ ತಂದಿದೆ. ಚಳಿ ಹೊಡೆತಕ್ಕೆ ಟೊಮೆಟೋ ಗಿಡಗಳಲ್ಲಿ ಕಾಯಿಗಳು ಬಿಡುತ್ತಿಲ್ಲ. ಆದರಿಂದ ಟೊಮೆಟೊ ಇಳುವರಿ ಶೇ.60 ರಷ್ಟು ಇಳಿಕೆಯಾಗಿದೆ. ಅಯ್ಯೋ ಬೆಳೆ ಇಲ್ಲದೆ ಹೇಗಪ್ಪ ಜೀವನ ಮಾಡೋದು ಅಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರೈತರ ಮುಖದಲ್ಲಿ ಈಗ ಖುಷಿ ಮೂಡಿದೆ. ಇಳುವರಿ ಕಡಿಮೆಯಾದ ಬೆನ್ನಲ್ಲೇ ಟೊಮೆಟೋ ಬೆಲೆ ಏರಿಕೆಯಾಗಿದೆ. ಆದರಿಂದ 10-20 ರೂ. ಗೆ ಸಿಗುತ್ತಿದ್ದ ಟೊಮೆಟೋ ಏಕಾಏಕಿ 70 ರೂ.ಗೆ ಜಿಗಿದಿದೆ. ಇನ್ನು 1 ರಿಂದ 2 ತಿಂಗಳ ಕಾಲ ಟೊಮೆಟೋ ದುಬಾರಿಯಾಗಲಿದ್ದು, ಟೊಮೆಟೋ ಬೆಳೆಗಾರರಿಗೆ ಬಂಪರ್ ಲಾಟರಿ ಹೊಡಿದಂತೆ ಆಗಿದ್ದರೇ, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.

ಗ್ಯಾಸ್ ಬೆಲೆ ಇಳಿಕೆಯಾದ ಖುಷಿಯಲ್ಲಿದ್ದ ಗೃಹಿಣಿಯರಿಗೆ ಟೊಮೆಟೋ ಶಾಕ್ ನೀಡಿದೆ. ಎಲ್ಲೆಡೆ ದಾಖಲೆ ಪ್ರಮಾಣದ ಚಳಿ ಹಿನ್ನೆಲೆ ಟೊಮೆಟೋ ಕಾಯಿ ಕಟ್ಟದೇ ಇಳುವರಿ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನು ಮುಂದಿನ 1 ರಿಂದ 2 ತಿಂಗಳ ಕಾಲ ಟೊಮೆಟೋ ಹೀಗೇ ಗಗನ ಕುಸುಮವಾಗೇ ಇರುತ್ತೆ ಎನ್ನಲಾಗುತ್ತಿದೆ. ಸದ್ಯ ಗೃಹಿಣಿಯರು ಯಾಕ್ ಹಿಂಗಾಯ್ತು ಅಂತ ಬೇಸರದಲ್ಲಿದ್ದರೆ. ಟೊಮೆಟೋ ಬೆಳೆಗಾರರು ಬೆಲೆ ಏರಿಕೆಯಿಂದ ಸಂತಸದಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv