80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ?

Advertisements

ತಿರುವನಂತಪುರಂ: 2 ವರ್ಷಗಳಿಂದ ಕೊರೊನಾ ಸೋಂಕು ಬಂದು ಇಡೀ ವಿಶ್ವವನ್ನೆ ಬೆಚ್ಚಿ ಬೀಳಿಸಿತ್ತು. ಈ ಸೋಂಕು ಇಡೀ ವಿಶ್ವದಿಂದ ಸಂಪೂರ್ಣವಾಗಿ ಹೋಗಿಯೇ ಇಲ್ಲ. ಈ ನಡುವೆಯೇ ಹೊಸ ಸೋಂಕು ಕೇರಳದಲ್ಲಿ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಈ ಸೋಂಕನ್ನು ‘ಟೊಮೆಟೊ ಜ್ವರ’ ಎಂದು ತಜ್ಞರು ಕರೆದಿದ್ದಾರೆ.

Advertisements

ಇತ್ತೀಚೆಗೆ ವಿಷಾಹಾರ ಸೇವನೆಯಿಂದ 58 ಮಂದಿ ಸಾವಿಗೀಡಾಗಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಆಘಾತಕ್ಕೊಳಗಾಗಿರುವ ಕೇರಳ ಇದೀಗ ಮತ್ತೊಂದು ನಿಗೂಢ ಕಾಯಿಲೆಗೆ ತುತ್ತಾಗುತ್ತಿದೆ. ಇದನ್ನು ತಜ್ಞರು ‘ಟೊಮೆಟೋ ಜ್ವರ’ ಎಂದು ಕರೆಯುತ್ತಿದ್ದಾರೆ. ಈಗಾಗಲೇ ಸೋಂಕಿಗೆ 80 ಕ್ಕೂ ಹೆಚ್ಚು ಮಕ್ಕಳು ತುತ್ತಾಗಿದ್ದಾರೆ. ಪ್ರಸ್ತುತ ಈ ಎಲ್ಲ ಪ್ರಕರಣಗಳು ಕೊಲ್ಲಂನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

Advertisements

ಟೊಮೆಟೊ ಜ್ವರ ಎಂದರೇನು?
ಇದು ಅಪರೂಪದ ವೈರಲ್ ಕಾಯಿಲೆಯಾಗಿದೆ. ಈ ಕಾಯಿಲೆ ಬಂದಾಗ ಕೆಂಪು-ಬಣ್ಣದ ದದ್ದುಗಳು, ಚರ್ಮದಲ್ಲಿ ಕಿರಿಕಿರಿ ಉಂಟುಮಾಡುತ್ತದೆ. ಈ ಕಾಯಿಲೆ ಬಂದರೆ ಟೊಮೆಟೊಗಳಂತೆ ಗುಳ್ಳೆಗಳು ಬರುತ್ತೆ. ಅದಕ್ಕೆ ಇದನ್ನು ಟೊಮೆಟೊ ಜ್ವರ ಎಂದು ಕರೆಯಲಾಗಿದೆ. ಈ ಟೊಮೆಟೊ ಜ್ವರ ಕೇರಳದಲ್ಲಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ರೋಗದ ಲಕ್ಷಣಗಳು
ಈ ಕಾಯಿಲೆ ಬಂದಾಗ ಟೊಮೆಟೊ ಗಾತ್ರದ ಗುಳ್ಳೆಗಳು ಬಂದು ಅವು ಕೆಂಪು ಬಣ್ಣಕ್ಕೆ ತಿರುಗುತ್ತೆ. ಇತರ ರೋಗಲಕ್ಷಣಗಳೆಂದರೆ ಅಧಿಕ ಜ್ವರ, ದೇಹದಲ್ಲಿ ನೋವು, ಕೀಲು ಊತ ಮತ್ತು ಆಯಾಸ ಇರುತ್ತೆ. ಈ ಕಾಯಿಲೆ ಚಿಕೂನ್‍ಗುನ್ಯಾದಂತೆಯೇ ಇರುತ್ತದೆ. ಆರ್ಯಂಕಾವು, ಅಂಚಲ್ ಮತ್ತು ನೆಡುವತ್ತೂರ್‌ನಲ್ಲೂ ಈ ಪ್ರಕರಣಗಳು ದಾಖಲಾಗಿದೆ. ಇದನ್ನೂ ಓದಿ:  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಎಂಪಿ ಶಿಕ್ಷಣ ಸಚಿವರ ಸೊಸೆ

Advertisements

ತಮಿಳುನಾಡು-ಕೇರಳ ಗಡಿಯಲ್ಲಿ ಕಣ್ಗಾವಲು
ಕೇರಳ ಜಿಲ್ಲೆಯೊಂದರಲ್ಲಿ ‘ಟೊಮೆಟೊ ಜ್ವರ’ ಹರಡುತ್ತಿರುವ ಹಿನ್ನೆಲೆ ತಮಿಳುನಾಡು-ಕೇರಳ ಗಡಿಯಲ್ಲಿರುವ ವಾಳಯಾರ್‍ನಲ್ಲಿ ಕಣ್ಗಾವಲು ಕಾಯಲಾಗುತ್ತಿದೆ. ಕೇರಳದಿಂದ ಕೊಯಮತ್ತೂರ್‌ಗೆ ಬರುವವರಿಗೆ ವೈದ್ಯಕೀಯ ತಂಡ ಪರೀಕ್ಷೆಗಳನ್ನು ನಡೆಸುತ್ತಿದೆ.

ಎಲ್ಲ ವಾಹನಗಳ ಪ್ರಯಾಣಿಕರನ್ನು, ವಿಶೇಷವಾಗಿ ಮಕ್ಕಳನ್ನು ಪರೀಕ್ಷಿಸಲು ಇಬ್ಬರು ವೈದ್ಯಕೀಯ ಅಧಿಕಾರಿಗಳ ತಂಡವನ್ನು ನಿಗದಿಪಡಿಸಲಾಗಿದೆ. ಅಂಗನವಾಡಿಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪರೀಕ್ಷಿಸಲು 24 ಸದಸ್ಯರ ತಂಡವನ್ನು ಸಹ ರಚಿಸಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

ಕರ್ನಾಟಕವು ಈ ಸೋಂಕಿನಿಂದ ಎಚ್ಚೆತ್ತುಕೊಳ್ಳುವುದು ತುಂಬಾ ಮುಖ್ಯ. ಏಕೆಂದರೆ ಕೇರಳ ಗಡಿ ಕರ್ನಾಟಕಕ್ಕೂ ಅಂಟಿಕೊಂಡಿದೆ. ಈ ಹಿನ್ನೆಲೆ ಕೇರಳದಿಂದ ಬಂದವರನ್ನು, ಅದರಲ್ಲಿಯೂ ಮಕ್ಕಳನ್ನು ಸರಿಯಾಗಿ ವೈದ್ಯಕೀಯ ಪರೀಕ್ಷೆ ಮಾಡಿಸುವುದು ತುಂಬಾ ಅವಶ್ಯಕ. ಇಲ್ಲದೇ ಹೋದರೆ ಸೋಂಕು ಕರ್ನಾಟಕದಲ್ಲಿಯೂ ಹರಡಿಕೊಳ್ಳಬಹುದು.

Advertisements
Exit mobile version