Cinema
ಮೆಗಾಸ್ಟಾರ್ ಚಿರು ಆಚಾರ್ಯ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರಾ ಸುದೀಪ್?

ಹೈದರಾಬಾದ್: ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಆಚಾರ್ಯ ಸಿನಿಮಾದಲ್ಲಿ ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಇತ್ತೀಚಿಗಷ್ಟೇ ಆಚಾರ್ಯ ಸಿನಿಮಾದ 1 ನಿಮಿಷ 7 ಸೆಕೆಂಡ್ ಕಿರು ಟೀಸರ್ ರಿಲೀಸ್ ಆಗಿದ್ದು, ಹಿಂದೆಂದೂ ನೋಡಿರದ ಹೊಸ ಆಕ್ಷನ್ ಅವತಾರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಿದ್ದಾರೆ. ಅಪ್ಪ ಚಿರು ಆಚಾರ್ಯ ಚಿತ್ರದ ಟೀಸರ್ ವೀಕ್ಷಿಸಿದ ಮಗ ರಾಮ್ ಚರಣ್ ತೇಜ ಸಂಭ್ರಮದಲ್ಲಿದ್ದಾರೆ. ಟೀಸರ್ ಬಿಡಗಡೆ ನಂತರ ಪ್ರೇಕ್ಷಕರಿಂದ ಅದ್ಬುತ ರೆಸ್ಪಾನ್ಸ್ ಪಡೆದ ಆಚಾರ್ಯ ಸಿನಿಮಾ ಇದೀಗ ಎಲ್ಲೆಡೆ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿದೆ.
ವಿಶೇಷವೆನೆಂದರೆ ಕನ್ನಡದ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್ ಆಚಾರ್ಯ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲಡೆ ಹರಿದಾಡುತ್ತಿದೆ. ಈ ಕುರಿತಂತೆ ಆಚಾರ್ಯ ಚಿತ್ರತಂಡ ಈಗಾಗಲೇ ಕಿಚ್ಚ ಸುದೀಪ್ ಜೊತೆ ಮಾತುಕತೆ ನಡೆಸಿದ್ದು, ಕಿಚ್ಚನ ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆಚಾರ್ಯ ಚಿತ್ರದಲ್ಲಿ ಬಾಲಿವುಡ್ ನಟ ಸೋನು ಸೂದ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಮೆಗಾ ಸ್ಟಾರ್ ಚಿರಂಜೀವಿಯವರ ಹಿಂದಿನ ಸೈರಾ ನರಸಿಂಹ ರೆಡ್ಡಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ಕಿಚ್ಚ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ಎಂಬ ವಿಚಾರ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.
ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 25 ವರ್ಷ ಕಳೆದ ಸಂಭ್ರಮವನ್ನು ದುಬೈನಲ್ಲಿ ಆಚರಿಸಿಕೊಂಡಿದ್ದರು.
