Connect with us

Cinema

ಛೇ ಅವನು ಪ್ರೀತಿಗಾಗಿ ಸತ್ತ, ಆದ್ರೆ ನಾನು ಆ ಟೈಪ್ ಅಲ್ಲ – ಲವರ್ ಬಾಯ್ ಪ್ರಭಾಸ್

Published

on

ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ಅಭಿನಯದ ಬಹು ನೀರಿಕ್ಷಿತ ಸಿನಿಮಾ ರಾಧೆ ಶ್ಯಾಮ್ ಟೀಸರ್ ಇಂದು ಬಿಡುಗಡೆಗೊಂಡಿದೆ. ವಿಶೇಷವೆಂದರೆ ಪ್ರೇಮಿಗಳ ದಿನ ಟೀಸರ್ ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ ಪ್ರೇಮಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಜೊತೆಗೆ ಸಿನಿಮಾದ ಟೀಸರ್ ಪ್ರಭಾಸ್ ತಮ್ಮ ಇನ್ಸ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಶೇಷವಾಗಿ ಪ್ರೇಮಿಗಳ ದಿನದಂದು ಕನ್ನಡ, ತಮಿಳು, ತೆಲುಗು,ಹಿಂದಿ, ಮಲೆಯಾಳಂ ಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿದೆ. ಪ್ರಭಾಸ್ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಟೀಸರ್‍ನಲ್ಲಿ ಪ್ರಭಾಸ್ ಯುರೋಪಿನ ರೈಲ್ವೆ ನಿಲ್ದಾಣವೊಂದರಲ್ಲಿ ಜನರ ಗುಂಪುಗಳ ಮಧ್ಯೆ ನಿಂತು ದೂರ ಹೋಗುತ್ತಿದ್ದ ಪೂಜಾ ಹೆಗ್ಡೆಯವರಿಗೆ ಮೇಲಕ್ಕೆ ಜಪ್ ಮಾಡುತ್ತಾ ಫ್ರೆಂಚ್ ಭಾಷೆಯಲ್ಲಿ ಕೆಲವು ಸಾಲುಗಳನ್ನು ಹೇಳುತ್ತಾರೆ. ಹಾಗೂ ಟೀಸರ್‍ನ ಚಿಕ್ಕದೊಂದು ತುಣುಕಿನಲ್ಲಿ ಪೂಜಾ ‘ನಿನ್ನನ್ನು ನೀನು ರೋಮಿಯೋ ಎಂದು ತಿಳಿದುಕೊಂಡಿದ್ದೀಯಾ ಎಂದು ಪ್ರಶ್ನಿಸಿದಾಗ, ಪ್ರಭಾಸ್ ಛೇ.. ಅವನು ಪ್ರೀತಿಗಾಗಿ ಸತ್ತ, ಆದ್ರೆ ನಾನು ಆ ಟೈಪ್ ಅಲ್ಲ’ ಎಂಬ ಡೈಲಾಗ್ ಹೇಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

 

View this post on Instagram

 

A post shared by Prabhas (@actorprabhas)

2 ದಿನಗಳ ಹಿಂದೆಯಷ್ಟೇ ಪ್ರಭಾಸ್ ತಮ್ಮ 41ನೇ ಹುಟ್ಟುದ ದಿನ ರಾಧೆಶ್ಯಾಮ್ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದರು. ಇದೀಗ ಪ್ರೇಮಿಗಳ ದಿನದಂದು ತೆಲುಗು, ಹಿಂದಿ, ತಮಿಳು, ಕನ್ನಡ, ಮಲೆಯಾಳಂನಲ್ಲಿ ಟೀಸರ್ ಬಿಡುಗಡೆಗೊಳಿಸುವ ಮೂಲಕ ಪ್ರೇಮಿಗಳಿಗೆ ಗಿಫ್ಟ್ ನೀಡಿದ್ದಾರೆ.

 

View this post on Instagram

 

A post shared by Prabhas (@actorprabhas)

ರಾಧೆ ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ಪೂಜಾ ಡ್ಯೂಯೆಟ್ ಹಾಡಿದ್ದಾರೆ. ಈ ಸಿನಿಮಾಕ್ಕೆ ರಾಧಾ ಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಘೂಷನ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ.

ಯುರೋಪ್‍ನಲ್ಲಿ ನಡೆದ ಒಂದು ಪ್ರೇಮಕಥಾ ಹಂದರವನ್ನು ಹೊಂದಿರುವ ರಾಧೆ ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ವಿಕ್ರಮಾದಿತ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೂಜಾ ಹೆಗ್ಡೆ ಪ್ರೇರಣಾ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಜುಲೈ 30ರಂದು ವಿಶ್ವಾದ್ಯಂತ ಬಿಗ್ ಸ್ಕ್ರೀನ್ ಮೇಲೆ ಬಿಡುಗಡೆಗೊಳ್ಳಲಿದೆ.

Click to comment

Leave a Reply

Your email address will not be published. Required fields are marked *