Cinema
‘ರಿಂಗ್ ಮಾಸ್ಟರ್’ ಚಿತ್ರದ ನಟಿ ಶ್ವೇತಾ ಕುಮಾರಿ ಅರೆಸ್ಟ್

ಮುಂಬೈ: ಕನ್ನಡದ ರಿಂಗ್ ಮಾಸ್ಟರ್ ಚಿತ್ರದ ನಾಯಕಿ ಶ್ವೇತಾ ಕುಮಾರಿಯನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಂಧನಕ್ಕೂ ಮುನ್ನ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.
ಈ ಸಂಬಂಧ ಎನ್ಸಿಬಿ ಝೋನಲ್ ಡೈರೆಕ್ಟರ್ ಸಮೀರ್ ಮಾಹಿತಿ ನೀಡಿದ್ದಾರೆ. ಮುಂಬೈ ಪೆಡ್ಲರ್ ಕರೀಂ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಈತ ನೀಡಿದ ಮಾಹಿತಿ ಆಧಾರದ ಮೇಲೆ ಇದೀಗ ನಟಿ ಶ್ವೇತಾ ಕುಮಾರಿಯನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶ್ವೇತಾ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರಲ್ಲದೆ ಮಾರಾಟ ಕೂಡ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯ್ಲಲಿ ಡ್ರಗ್ ಪೆಡ್ಲರ್ ಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದೆ. ನಟಿಯ ಬಂಧನದ ವೇಳೆ 10 ಲಕ್ಷ ನಗದು, 10 ಗ್ರಾಂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಮೊಬೈಲ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಕಾಲ್ ಡೀಟೈಲ್ಸ್, ನಂಬರ್ಸ್ ಹಾಗೂ ಚಾಟ್ಸ್ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಡ್ರಗ್ಸ್ ಪ್ರಕರಣ ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ಹಾಗೂ ಟಾಲಿವುಡ್ ಸಿನಿ ಜಗತ್ತನ್ನೇ ನಡುಗಿಸಿದ್ದು, ಹೆಸರಾಂತ ನಟ-ನಟಿಯರು ಸಿಕ್ಕಿಬಿದ್ದು ಜೈಲು ಸೇರಿದ್ದಾರೆ. ಸದ್ಯ ಟಾಲಿವುಡ್ ನಟಿ ಶ್ವೇತಾ ಕುಮಾರಿಯ ಬಂಧನವಾಗುತ್ತಿದ್ದಂತೆಯೇ ಇತರ ನಟಿಯರಿಗೆ ನಡುಕ ಹುಟ್ಟಿದೆ.
