Wednesday, 16th October 2019

Recent News

ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ಘೋಷಣೆ: ಕಾಂಗ್ರೆಸ್

– ರಾಹುಲ್ ಪ್ರಧಾನಿ ಕನಸಿಗೆ ಹಿನ್ನಡೆ

ನವದೆಹಲಿ: 2019 ರ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಉತ್ತರ ಪ್ರದೇಶ ಬಿಹಾರ್ ಹಾಗೂ ಮಹಾರಾಷ್ಟ್ರದಲ್ಲಿ ಮೈತ್ರಿಗೆ ಮುಂದಾಗಿರುವುದು ತಿಳಿದ ವಿಷಯ. ಆದರೆ ಬಿಜೆಪಿ ಸರ್ಕಾರವನ್ನ ಮಣಿಸಲು ಕಾಂಗ್ರೆಸ್ ಸಮೂಹ ನಾಯಕತ್ವ ಮುಂದುವರೆಯಲು ಮುಂದಾಗಿದೆ. ಈ ಹಿನ್ನೆಲೆ ಪ್ರಧಾನಿ ಅಭ್ಯರ್ಥಿಯನ್ನು ಚುನಾವಣೆ ಬಳಿಕ ನಿರ್ಧರಿಸಲಾಗುವುದು ಎಂದು ಶುಕ್ರವಾರ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಪ್ರಭಾವವನ್ನು ಮಣಿಸಲು ಮುಂದಾಗಿರುವ ಕಾಂಗ್ರೆಸ್ ವಿವಿಧ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗೆ ಈಗಾಗಲೇ ಸಿದ್ಧತೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೈತ್ರಿ ಭಾಗವಾಗಿ ಕರ್ನಾಟಕ, ಗುಜರಾತ್, ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ರಾಜ್ಯಗಳು ಪ್ರಮುಖವಾಗಿದ್ದು, ಮೈತ್ರಿ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಹಿಡಲು ಕಾಂಗ್ರೆಸ್ ಮುಂದಾಗಿದೆ.

ಪ್ರಮುಖವಾಗಿ 2019 ರ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಆಗಲು ಬಿಜೆಪಿಗೆ ಕನಿಷ್ಟ 230 ಲೋಕಸಭಾ ಸ್ಥಾನಗಳು ಅಗತ್ಯವಿದ್ದು, ಬಳಿಕ ಎನ್‍ಡಿಎ ಒಕ್ಕೂಟ ಇತರೇ ಪಕ್ಷಗಳ ಮೈತ್ರಿ ನಡೆಸಲಿದೆ. ಇದು ತಮಗೇ ಅರಿವಿದೆ ಎಂದು ಕಾಂಗ್ರೆಸ್ ವಕ್ತಾರಕರು ತಿಳಿಸಿದ್ದಾರೆ.

ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪಕ್ಷದ ಸ್ಥಳೀಯ ಘಟಕಗಳ ನಾಯಕರ ಅಭಿಪ್ರಾಯವನ್ನು ಪರಿಗಣಿಸುವುದಾಗಿ ತಿಳಿಸಿದೆ. ಪ್ರಮುಖವಾಗಿ ಪಂಜಾಬ್, ದೆಹಲಿ, ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಮೈತ್ರಿ ರಚಿಸುವಲ್ಲಿ ಎಚ್ಚರಿಕೆಯಿಂದ ನಡೆಸಲು ಮುಂದಾಗಿದೆ. ಪ್ರಮುಖವಾಗಿ ಚುನಾವಣೆಯಲ್ಲಿ 2 ಸಿದ್ಧಾಂತಗಳನ್ನು ಹೊಂದಿರುವ ಕಾಂಗ್ರೆಸ್ ಮೊದಲು ಮೋದಿ ಹಾಗೂ ಆರ್‍ಎಸ್‍ಎಸ್ ಸೋಲಿಸಲು ಮುಂದಾಗಿದೆ. ಬಳಿಕ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ನಡೆಸಲಿದೆ. ಈ ಎಲ್ಲಾ ನಿರ್ಧಾರಗಳು ಕಾಂಗ್ರೆಸ್ ಎಐಸಿಸಿ ನಾಯಕ ರಾಹುಲ್ ಗಾಂಧಿ ತೀರ್ಮಾನಿಸಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಮೈತ್ರಿ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷವೂ ಮೋದಿ ಸರ್ಕಾರ ವಿಫಲತೆ, ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ಹಾಗೂ ರೈತರ ಪರ ಹೋರಾಟ ಅಂಶಗಳನ್ನು ಜನತೆಯ ಮುಂದಿಟ್ಟು ಹೋರಾಟ ನಡೆಸುವ ತಯಾರಿಯಲ್ಲಿದೆ. ಅಲ್ಲದೇ ಇದರ ನಡುವೆಯೇ ಇವಿಎಂ ಮಿಷೆನ್ ಬಳಕೆ ಕುರಿತು ಮಿತ್ರ ಪಕ್ಷಗಳೊಂದಿಗೆ ಚರ್ಚಿಸಿ ತೀರ್ಮಾನಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *