Friday, 17th August 2018

Recent News

ಎಲೆಕ್ಟ್ರಿಕ್ ಕಾರ್ ಬಳಸಿದ ಮೊದಲ ದೇವಸ್ಥಾನ ಖ್ಯಾತಿಗೆ ತಿರುಮಲ ಸೇರ್ಪಡೆ

ವಿಜಯವಾಡ: ತಿರುಮಲ ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಎಲೆಕ್ಟ್ರಿಕ್ ಕಾರ್ ಬಳಸಿದ ಮೊದಲ ದೇವಸ್ಥಾನ ಎಂದು ಪರಿಗಣಿತವಾಗಿದೆ.

ದೇವಸ್ಥಾನದ ಸಿಬ್ಬಂದಿಯ ದೈನಂದಿನ ಓಡಾಟಕ್ಕೆ ಎಲೆಕ್ಟ್ರಿಕ್ ಕಾರ್ ಗಳನ್ನು ಬಳಸಲಾಗುತ್ತದೆ. ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ರಾಜ್ಯ ನಿರ್ವಹಣೆಯ ಇಂಧನ ದಕ್ಷತಾ ಸೇವಾ ಕಂಪೆನಿ(ಇಇಎಸ್‍ಎಲ್)ಯು 350 ಎಲೆಕ್ಟ್ರಿಕ್ ಕಾರುಗಳನ್ನು ಸರ್ಕಾರಕ್ಕೆ ಸರಬರಾಜು ಮಾಡಿದೆ. ಇದರಲ್ಲಿ 50 ಕಾರುಗಳನ್ನು ತಿರುಪತಿ ದೇವಸ್ಥಾನದ ಸಿಬ್ಬಂದಿ ಬಳಕೆಗೆ ಕೊಡಲಾಗುತ್ತದೆ.

ಎಲೆಕ್ಟ್ರಿಕ್ ವಾಹನಗಳನ್ನು ತಿಂಗಳ ಆಧಾರದ ಮೇಲೆ ಒಪ್ಪಂದದ ಪ್ರಕಾರ ಇಇಎಸ್‍ಎಲ್ ನಿಂದ ಪಡೆಯಲಾಗುತ್ತದೆ. ಮೊದಲಿಗೆ 50 ವಾಹನಗಳನ್ನು ರಾಜ್ಯಾದ್ಯಂತ ಆಯ್ಕೆ ಮಾಡಲಾದ ಜಾಗಗಳಲ್ಲಿ ಬಳಸಲಾಗುತ್ತದೆ. ಪ್ರತಿ ವಾಹನಕ್ಕೆ ತಿಂಗಳಿಗೆ 20 ಸಾವಿರ ರೂಪಾಯಿಗಳನ್ನು ಮತ್ತು ಚಾಲಕ ಹಾಗೂ ವಾಹನದ ನಿರ್ವಹಣೆಗೆ 20 ಸಾವಿರ ರೂಪಾಯಿಗಳನ್ನು ನಿಗಮವು ಪಾವತಿ ಮಾಡುತ್ತದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಮುಖ್ಯಸ್ಥ ಎಂ ಕಮಲಾಕರ್ ಬಾಬು ತಿಳಿಸಿದ್ದಾರೆ.

ಬ್ಯಾಟರಿ ಮತ್ತು ಗೇರ್ ಗಳ ಬಗ್ಗೆ ಚಾಲಕರಿಗೆ ತರಬೇತಿಯನ್ನು ನೀಡಲಾಗುತ್ತದೆ. ಪ್ರತಿ ಕಾರಿನ ಬೆಲೆ 11 ಲಕ್ಷ ರೂ. ಆಗಿದ್ದು 6 ವರ್ಷಗಳ ಬಳಿಕ ಕಾರಿನ ಮಾಲೀಕತ್ವವನ್ನು ಸರ್ಕಾರಕ್ಕೆ ವಹಿಸಲಾಗುತ್ತದೆ. ತಿರುಪತಿ ದೇವಸ್ಥಾನ ಅಲ್ಲದೆ ತಿರುಪತಿ ಮುನಿಸಿಪಲ್ ಕಾರ್ಪೊರೇಶನ್, ಗ್ರೇಟರ್ ವಿಶಾಖಪಟ್ಟಣದ ಮುನಿಸಿಪಲ್ ಕಾರ್ಪೊರೇಶನ್ ಹಾಗೂ ಅಮರಾವತಿ ಕಾರ್ಯದರ್ಶಿಗಳ ಕಾರ್ಯಾಲಯದಲ್ಲಿ ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುತ್ತದೆ.

ಪ್ರಯಾಣದ ದರ ಒಂದು ಕಿಮೀ ಗೆ 2 ರೂ ಇರಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿಮೀ ಈ ಕಾರ್ ಚಲಿಸುತ್ತದೆ.

Leave a Reply

Your email address will not be published. Required fields are marked *