ಟೈಗರ್ ಶ್ರಾಫ್ ಫೈರಿಂಗ್ ಕೇಸ್ | ಸೂರತ್‌ನಲ್ಲಿ 2 ಪಿಸ್ತೂಲ್ ವಶಪಡಿಸಿಕೊಂಡ ಮುಂಬೈ ಕ್ರೈಂ ಬ್ರ್ಯಾಂಚ್‌ ಟೀಂ

1 Min Read

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಪೊಲೀಸರು (Mumbai Crime Branch Police) ಸೂರತ್‌ನಲ್ಲಿ 2 ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಶೂಟರ್‌ಗಳು ದಾಳಿ ನಡೆಸಿದ ಬಳಿಕ ಪರಾರಿಯಾಗುವಾಗ ಸೂರತ್‌ನಲ್ಲಿ ಈ ಪಿಸ್ತೂಲ್‌ಗಳನ್ನು ಬಚ್ಚಿಟ್ಟಿದ್ದರು ಎನ್ನಲಾಗಿದ್ದು, ಅದೇ ಪಿಸ್ತೂಲ್‌ಗಳನ್ನು ಇದೀಗ ಮುಂಬೈ ಅಪರಾಧ ವಿಭಾಗದ ಪೊಲೀಸರು ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ. ಆದರೆ ಪೊಲೀಸರು ನಿಖರವಾಗಿ ಪಿಸ್ತೂಲ್‌ಗಳು ಪತ್ತೆಯಾದ ನಿಖರ ಸ್ಥಳವನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಟೈಗರ್ ಫೈರಿಂಗ್ ಕೇಸ್ | ಮುಂಬೈ ಬಳಿ ಶೂಟಿಂಗ್ ಪ್ರ್ಯಾಕ್ಟೀಸ್‌ – ಒಮ್ಮೆ ಹಾರಿಸಿದಾಗ ಮಿಸ್ ಫೈರ್: ತನಿಖೆ ವೇಳೆ ಬಯಲಾಯ್ತು ಸತ್ಯ

ಸದ್ಯ ಪೊಲೀಸರು ಪತ್ತೆಯಾದ ಪಿಸ್ತೂಲ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಳಿಕ ಹೆಚ್ಚಿನ ಮಾಹಿತಿ ಹೊರಬರಲಿದೆ.

ಆಗಿದ್ದೇನು?
ಅ.18ರಂದು ಮುಂಬೈನ ಜುಹು ಎಂಬಲ್ಲಿ ಮೂವರು ಆರೋಪಿಗಳು ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಟೈಗರ್ ಶ್ರಾಫ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದರು.

ಈಗಾಗಲೇ ಮುಂಬೈ ಪೊಲೀಸರು ಹಲವರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ತನಿಖೆ ವೇಳೆ ಆರೋಪಿಗಳು ಗುಂಡಿನ ದಾಳಿಗಾಗಿ ಪ್ರ್ಯಾಕ್ಟೀಸ್‌ ಮಾಡಿರುವ ಬಗ್ಗೆ ಹಾಗೂ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎನ್ನಲಾದ ಅನಿಲ್ ಪಂಡಿತ್‌ನಿಂದ ಖರ್ಚಿಗೆ ಹಣ ಹಾಗೂ ವಿದೇಶದಲ್ಲಿ ಉದ್ಯೋಗ ಪಡೆದುಕೊಳ್ಳುವ ಆಮಿಷಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಕೇಸ್ – ವಡೋದರಾದಲ್ಲಿ ಮತೋರ್ವ ಆರೋಪಿ ಅರೆಸ್ಟ್

Share This Article
Exit mobile version