Friday, 23rd August 2019

Recent News

ಕತ್ತೆ ಮೇಲೆ ಕೂತ ಅಮೀರ್ ಫುಲ್ ವೈರಲ್!

ಮುಂಬೈ: ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರು ಪಡೆದಿರುವ ಅಮೀರ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾದ `ಥಗ್ಸ್ ಆಫ್ ಹಿಂದೂಸ್ತಾನ್’ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಅಮೀರ್ ಖಾನ್ ಸ್ವತಃ ತಮ್ಮ ಇನ್ ಸ್ಟಾಗ್ರಾಮ್ ಮೂಲಕ `ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ತಮ್ಮ ಪಾತ್ರದ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಪೋಸ್ಟರ್ ನಲ್ಲಿ ಅಮೀರ್ ಖಾನ್ ವಿಶೇಷ ಅವತಾರದಲ್ಲಿ ಕತ್ತೆಯ ಮೇಲೆ ಕೂತು ಫೋಟೋಗೆ ಪೋಸ್ ನೀಡಿದ್ದಾರೆ.

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಪೋಸ್ಟರ್ ಗೆ ಅಮೀರ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟರ್ ನಲ್ಲಿ ವಿಭಿನ್ನ ವೇಷಭೂಷಣ ಧರಿಸಿ ಕತ್ತೆಯ ಮೇಲೆ ಕುಳಿತಿರುವ ಚಿತ್ರ ಸಾಕಷ್ಟು ಕುತೂಹಲ ಕೆರೆಳಿಸಿದೆ. ಚಿತ್ರದಲ್ಲಿ ಯಾವ ರೀತಿ ಪಾತ್ರ ಮಾಡಿದ್ದಾರೆ ಎನ್ನುವ ಮಾತುಗಳು ಸಾಕಷ್ಟು ಕೇಳಿಬರುತ್ತಿವೆ.

ಪೋಸ್ಟರ್ ಬಿಡುಗಡೆಯಾಗುತ್ತಲೆ ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 2,000 ಕ್ಕಿಂತಲೂ ಹೆಚ್ಚಿನ ಕಾಮೆಂಟ್‍ಗಳು ಬಂದಿವೆ. `ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ ಅಮೀರ್ ಖಾನ್ ಫಿರಂಗಿ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೇರಿದಂತೆ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಒಳಗೊಂಡಿದೆ. ಇದಕ್ಕೂ ಮೊದಲು ಚಿತ್ರತಂಡ ಒಬ್ಬೊಬ್ಬರ ಟೀಸರ್ ಗಳನ್ನು ಬಿಡುಗಡೆಗೊಳಿಸಿತ್ತಾ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *