Crime
3ರ ಕಂದಮ್ಮನನ್ನ ಅತ್ಯಾಚಾರಗೈದ 12ರ ಬಾಲಕ

– ಘಟನೆ ಬಳಿಕ ತಂದೆ-ಮಗ ಎಸ್ಕೇಪ್
– ಮನೆಯ ಮುಂದೆ ಆಡುತ್ತಿದ್ದ ಮಗು
ರಾಂಚಿ: ಮೂರು ವರ್ಷದ ಕಂದಮ್ಮನನ್ನು 12ರ ಬಾಲಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಜಾರ್ಖಂಡ್ ರಾಜ್ಯದ ಪೂರ್ವ ಸಿಂಗಭೂಂ ಜಿಲ್ಲೆಯಲ್ಲಿ ನಡೆದಿದೆ.
ನವೆಂಬರ್ 4ರಂದು ಘಟನೆ ನಡೆದಿದ್ದು, ಬಾಲಕಿಯ ಪೋಷಕರು ಶನಿವಾರ ಸಂಜೆ ಲೋಕೋ ಕಾಲೋನಿಯ ಪಸುರ್ಧಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೆಂಬರ್ 4ರಂದು ಮನೆಯ ಮುಂಭಾಗದಲ್ಲಿ ಆಡುತ್ತಿದ್ದ ಬಾಲಕಿಯನ್ನು ಕರೆದೊಯ್ದ ಬಾಲಕ ಅತ್ಯಾಚಾರ ಎಸಗಿದ್ದಾನೆ ಎಂದು ಪೋಷಕರು ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: 6ರ ಬಾಲಕಿಯ ಮೇಲೆ 26 ವರ್ಷದ ಯುವಕನಿಂದ ಅತ್ಯಾಚಾರ
ಇತ್ತ ಘಟನೆ ಬಳಿಕ ಬಾಲಕ ಮತ್ತು ಆತನ ತಂದೆ ಎಸ್ಕೇಪ್ ಆಗಿದ್ದು, ಪೊಲೀಸರು ಇಬ್ಬರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಬಾಲಕಿಯ ಅತ್ಯಾಚಾರ ನಡೆದ ದಿನದಂತೆ ಆಕೆಯ ತಂದೆ ಕೆಲಸಕ್ಕಾಗಿ ಬೇರೆ ಊರಿಗೆ ತೆರಳಿದ್ದರು. ಹೀಗಾಗಿ ಬಾಲಕಿತ ತಂದೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪೋಷಕರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರಗೈದು ಕೊಲೆ – ಚಿಕ್ಕಪ್ಪ ಅರೆಸ್ಟ್
