ಭೋಪಾಲ್: ದೇಶದಾದ್ಯಂತ ವಿವಾಹಿತ ಮಹಿಳೆಯರು ತಮ್ಮ ಪತಿಯ ಆಯಸ್ಸು ಮತ್ತು ಶ್ರೇಯಸ್ಸಿಗಾಗಿ ಒಂದು ದಿನ ಉಪವಾಸ ಮಾಡುತ್ತಾರೆ. ಬಳಿಕ ಜರಡಿ ಮೂಲಕ ಚಂದ್ರನನ್ನು ನೋಡಿ ನಂತರ ಪತಿಯ ಮುಖವನ್ನು ನೋಡಿ ಕರ್ವಾಚೌತ್ ಹಬ್ಬವನ್ನು ಆಚರಿಸುತ್ತಾರೆ. ಆದರೆ ಮಧ್ಯ ಪ್ರದೇಶದಲ್ಲಿ ಮೂವರು ಪತ್ನಿಯರು ಒಟ್ಟಿಗೆ ಪತಿಯ ಮುಖವನ್ನು ನೋಡುತ್ತಿರುವ ಫೋಟೋವೊಂದು ವೈರಲ್ ಆಗಿದೆ.
ಮಧ್ಯಪ್ರದೇಶದ ಸತ್ನಾದಲ್ಲಿ ಮೂವರು ಮಹಿಳೆಯರು ತಮ್ಮ ಒಬ್ಬ ಪತಿಗಾಗಿ ಉಪವಾಸ ಮಾಡಿ ಹಬ್ಬವನ್ನು ಆಚರಿಸಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೂವರು ಮಹಿಳೆಯರು ತಮ್ಮ ಪತಿಯನ್ನು ಜರಡಿ ಮೂಲಕ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಮೂವರು ಸಹೋದರಿಯರು ಎಂದು ಹೇಳಲಾಗಿದೆ.
Advertisement
Advertisement
ಚಿತ್ರಕೂಟ್ನ ಲೋಧ್ವರದ ಕಾಶಿರಾಮ್ ಕಾಲೋನಿ ನಿವಾಸಿ ಕೃಷ್ಣ 12 ವರ್ಷಗಳ ಹಿಂದೆ ಶೋಭಾ, ರೀನಾ ಮತ್ತು ಪಿಂಕಿ ಎಂಬ ಮೂವರು ಸಹೋದರಿಯರನ್ನು ಮದುವೆಯಾಗಿದ್ದಾರೆ. ಅಂದಿನಿಂದ ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ. ಎಲ್ಲಾ ಸಹೋದರಿಯರಿಗೆ ತಲಾ ಇಬ್ಬರು ಮಕ್ಕಳಿದ್ದಾರೆ. ಪತಿಯ ಶ್ರೇಯಸ್ಸಿಗಾಗಿ ಮೂವರು ಸಹೋದರಿಯರು ಉಪವಾಸ ಕರ್ವಾಚೌತ್ ಹಬ್ಬವನ್ನು ಆಚರಿಸಿದ್ದಾರೆ.