Connect with us

Crime

ಶಿರಚ್ಛೇದವಾಗಿದ್ದ ಮಹಿಳೆ, ಮಕ್ಕಳಿಬ್ಬರ ಮೃತದೇಹ ಡ್ರಮ್‌ನಲ್ಲಿ ಪತ್ತೆ..!

Published

on

ಚಂಡೀಗಡ: ಹರಿಯಾಣದ ಭಿವಾನಿ ಜಿಲ್ಲೆಯ ರಸ್ತೆಯಲ್ಲಿ ಬಿದ್ದಿದ್ದ ಡ್ರಮ್‍ನೊಳಗೆ ತಲೆ ಇಲ್ಲದ ಮೂರು ಮೃತ ದೇಹಗಳು ಕಂಡುಬಂದಿವೆ.

ಖಾರಕ್ ಗ್ರಾಮದ ರೋಹ್ಟಕ್-ಭಿವಾನಿ ರಸ್ತೆಯಲ್ಲಿ ಶುಕ್ರವಾರ ಒಂದು ಡ್ರಮ್ ಪತ್ತೆಯಾಗಿದೆ. ಆದರೆ ಅದರೊಳಗೆ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಕಂಡು ಬಂದಿದ್ದು, ಮೃತಪಟ್ಟಿದ್ದ ಮೂವರ ತಲೆಯೂ ಕಟ್ ಆಗಿತ್ತು.

32 ವರ್ಷ ವಯಸ್ಸಿನ ಮಹಿಳೆ, 12 ವರ್ಷ ವಯಸ್ಸಿನ ಬಾಲಕಿ ಮತ್ತು ಎರಡು ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಮೃತರಿಗೆ ತಲೆ ಇಲ್ಲದ ಕಾರಣ ಅವರ ಗುರುತುಗಳನ್ನು ಪತ್ತೆ ಮಾಡಲು ತುಂಬಾ ಕಷ್ಟಕರವಾಗಿದೆ ಎಂದು ಎಸ್‍ಪಿ ಗಂಗಾ ರಾಮ್ ಪುನಿಯಾ ಹೇಳಿದ್ದಾರೆ.

ದೆಹಲಿ, ರಾಜಸ್ಥಾನ್ ಮತ್ತು ಪಂಜಾಬ್ ಪೊಲೀಸರು ಕಾಣೆಯಾದ ವ್ಯಕ್ತಿಗಳ ಬಗ್ಗೆ ಯಾರಾದರೂ ದೂರು ಸಲ್ಲಿಸಿದ್ದಾರೆಯೇ ಎಂದು ವಿಚಾರಣೆ ನಡೆಸಲಾಗುತ್ತಿದೆ. ಹಾಗೆಯೇ ನಾಪತ್ತೆಯಾದವರು ಹಾಗೂ ನಮಗೆ ಸಿಕ್ಕಿರುವ ಮೃತ ದೇಹಗಳು ಮ್ಯಾಚ್ ಆಗುತ್ತವೆಯಾ ಎಂದು ತನಿಖೆ ಮಾಡುತ್ತಿದ್ದೇವೆ ಎಂದು ಎಸ್‍ಪಿ ತಿಳಿಸಿದ್ದಾರೆ.

ಸದ್ಯಕ್ಕೆ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಯಾರೋ ಮೂವರ ಶಿರಚ್ಛೇದನ ಮಾಡಿ, ಬಳಿಕ ಮೃತ ದೇಹಗಳನ್ನು ಡ್ರಮ್ ನಲ್ಲಿ ತುಂಬಿ ರಸ್ತೆಯಲ್ಲಿ ಬಿಸಾಡಿದ್ದಾರೆ ಎಂದು ಹೇಳಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv