Monday, 16th December 2019

ಯಾಚ್‍ನಿಂದ ಸಮುದ್ರದಲ್ಲಿ ಬೀಳ್ತಿದ್ದ ಪ್ರಿಯಾಂಕಾಳನ್ನು ರಕ್ಷಿಸಿದ ನಿಕ್: ವಿಡಿಯೋ ನೋಡಿ

ಪ್ಯಾರೀಸ್: ವಿಹಾರ ನೌಕೆಯಿಂದ ಸಮುದ್ರಕ್ಕೆ ಬೀಳುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು ಅವರ ಪತಿ, ಗಾಯಕ ನಿಕ್ ಜೋನಸ್ ಕಾಪಾಡಿದ್ದಾರೆ. ನಿಕ್ ತಮ್ಮ ಪತ್ನಿ ಪ್ರಿಯಾಂಕಾಳನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೊತೆ ಅವರ ಸಹೋದರನ ಮದುವೆಯಲ್ಲಿ ಭಾಗವಹಿಸಲು ಪ್ಯಾರೀಸ್‍ಗೆ ಹೋಗಿದ್ದಾರೆ. ಈ ವೇಳೆ ಪ್ರಿಯಾಂಕಾ ಮತ್ತು ನಿಕ್ ವಿಹಾರ ನೌಕೆಯಲ್ಲಿ ಎಂಜಾಯ್ ಮಾಡುತ್ತಿದ್ದರು.

ವಿಹಾರ ನೌಕೆಯಲ್ಲಿ ಪ್ರಿಯಾಂಕ ತನ್ನ ಪತಿ ನಿಕ್ ಜೊತೆ ಡ್ಯಾನ್ಸ್ ಮಾಡುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಸಮುದ್ರದಲ್ಲಿ ಬೀಳುತ್ತಿದ್ದರು. ಈಗ ಪತಿ ನಿಕ್ ಜೋನಸ್ ಅವರು ಪ್ರಿಯಾಂಕಾರನ್ನು ಕಾಪಾಡಿದ್ದಾರೆ. ಈ ವೇಳೆ ಪ್ರಿಯಾಂಕಾ ಕೈಯಲ್ಲಿದ್ದ ಗ್ಲಾಸ್ ಸಮುದ್ರದಲ್ಲಿ ಬಿದಿದ್ದೆ. ನಿಕ್ ಕಾಪಾಡಿದ ನಂತರ ಪ್ರಿಯಾಂಕಾ ಅವರನ್ನು ನೋಡಿ ಮುಗಳುನಕ್ಕಿದ್ದಾರೆ.

ಈ ಪಾರ್ಟಿಯಲ್ಲಿ ಪ್ರಿಯಾಂಕಾ ಥೈ ಹೈ ಸಿಲ್ಟ್ ನ ಮ್ಯಾಕ್ಸಿ ಉಡುಪು ಧರಿಸಿದ್ದರೆ, ನಿಕ್ ಜೀನ್ಸ್ ಜೊತೆ ಕ್ಯಾಶೂಯಲ್ ಶರ್ಟ್ ಧರಿಸಿದ್ದರು. ನಿಕ್ ತನ್ನ ಪತ್ನಿ ಪ್ರಿಯಾಂಕಾರನ್ನು ಕಾಪಾಡಿದ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪ್ಯಾರೀಸ್‍ನಲ್ಲಿ ತಮ್ಮ ಪತಿ ನಿಕ್ ಜೊತೆ ಡ್ಯಾನ್ಸ್ ಮಾಡುತ್ತಿರುವ ಫೋಟೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *