Connect with us

Latest

ಫೋಟೋಗೆ ಕ್ಯಾಪ್ಶನ್ ಕೊಡಿ ಬಹುಮಾನ ಗೆಲ್ಲಿ: ಆನಂದ್ ಮಹೀಂದ್ರಾ

Published

on

ಮುಂಬೈ: ಮನೆಯೊಂದರ ಡಿಟಿಎಚ್ ಆಂಟೆನಾ ಮೇಲೆ ಕುಳಿತಿರುವ ಫೋಟೋವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಫೋಟೋಗೆ ಉತ್ತಮ ಕ್ಯಾಪ್ಶನ್ ನೀಡುವವರಿಗೆ ಮಹೀಂದ್ರಾ ವಾಹನದ ಮಾದರಿಯನ್ನು ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಆನಂದ್ ಮಹೀಂದ್ರಾ ಅವರು, ತನ್ನನ್ನು ಫಾಲೋ ಮಾಡುವವರಿಗೆ ವಿಶೇಷ ಆಫರ್ ನೀಡಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಅವರು, ನನ್ನ ಮುಂದಿನ ಕ್ಯಾಪ್ಶನ್ ಸ್ಪರ್ಧೆಗೆ ಇದಕ್ಕಿಂತ ಉತ್ತಮ ಫೋಟೋ ಇರಲು ಸಾಧ್ಯವಿಲ್ಲ. ಎಂದಿನಂತೆ ಸ್ಪರ್ಧೆಯಲ್ಲಿ ಇಬ್ಬರು ವಿಜೇತರನ್ನು ಆಯ್ಕೆ ಮಾಡುತ್ತೇವೆ. ಬೆಸ್ಟ್ ಹಿಂದಿ, ಇಂಗ್ಲೀಷ್ ಕ್ಯಾಪ್ಶನ್ ನೀಡಿದವರಿಗೆ ಮಹೀಂದ್ರಾ ವಾಹನದ ಮಾದರಿಯನ್ನು ನೀಡಲಾಗುವುದು. ಅಕ್ಟೋಬರ್ 11ರ ಮಧ್ಯಾಹ್ನ 2 ಗಂಟೆ ಮೊದಲು ಉತ್ತರ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: 30 ವರ್ಷ, 3 ಕಿ.ಮೀ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತನಿಗೆ ಆನಂದ್ ಮಹೀಂದ್ರಾ ಗಿಫ್ಟ್

ಕೋತಿ ಫೋಟೋಗೆ ಲಕ್ಷಗಳ ಬೆಲೆ ಬಾಳುವ ಕಾರು ನೀಡುವುದು ಉತ್ತಮವಲ್ಲ. ಅದಕ್ಕೆ ಮಹೀಂದ್ರಾ ವಾಹನದ ಬೊಂಬೆಯೇ ಸೂಕ್ತ ಎಂದು ಆನಂದ್ ಮಹೀಂದ್ರಾ ಭಾವಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಕೆಲವರು ನಿಜವಾದ ಕಾರನ್ನೇ ಗಿಫ್ಟ್ ನೀಡುತ್ತಾರೆ ಎಂದು ತಿಳಿದು ಸ್ಪರ್ಧೆಗೆ ಬಿದ್ದವರಂತೆ ಫೋಟೋಗೆ ಕ್ಯಾಪ್ಶನ್ ನೀಡುತ್ತಿದ್ದಾರೆ. ಮತ್ತೆ ಕೆಲವರು ಬೊಂಬೆಯ ಕಾರು ಆದರೂ ಉತ್ತಮ ಬೆಲೆಯುಳ್ಳ ಕಾರಿನ ಬೊಂಬೆಯನ್ನೇ ನೀಡುತ್ತಾರೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದನ್ನೂ ಓದಿ: ಭಾರತೀಯರ ಟೆಕ್ನಿಕ್ ಮುಂದೆ ಯಾರು ಇಲ್ಲ: ಆನಂದ್ ಮಹೀಂದ್ರಾ

Click to comment

Leave a Reply

Your email address will not be published. Required fields are marked *