Sunday, 15th December 2019

ಏಪ್ರಿಲ್ 28 ನನಗೆ ಯಾವಾಗಲೂ ಭಾವನಾತ್ಮಕ ದಿನ: ಪ್ರಭಾಸ್

ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅಭಿನಯಿಸಿದ ‘ಬಾಹುಬಲಿ 2- ದಿ ಕನ್‍ಕ್ಲೂಶನ್’ ಚಿತ್ರದ ಬಿಡುಗಡೆಯಾಗಿ ಭಾನುವಾರಕ್ಕೆ ಎರಡು ವರ್ಷವಾಗಿದೆ. ಈ ದಿನ ನನಗೆ ಎಂದಿಗೂ ಭಾವನಾತ್ಮಕವಾಗಿರುತ್ತೆ ಎಂದು ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಬಾಹುಬಲಿ-2 ಚಿತ್ರ ವಿಶ್ವದಾದ್ಯಂತ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಈ ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾಗಿದ್ದು, ಈ ದಿನ ಎಂದಿಗೂ ನನಗೆ ಭಾವನಾತ್ಮಕವಾಗಿ ಇರುತ್ತದೆ ಎಂದು ಪ್ರಭಾಸ್ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಇಂದಿಗೆ(ಭಾನುವಾರ) ಬಾಹುಬಲಿ 2- ದಿ ಕನ್‍ಕ್ಲೂಶನ್ ಚಿತ್ರದ ಬಿಡುಗಡೆಯಾಗಿ ಎರಡು ವರ್ಷ. ಈ ದಿನ ನನಗೆ ಯಾವಾಗಲೂ ಎಮೋಶನಲ್ ಆಗಿರುತ್ತದೆ. ಎಸ್‍ಎಸ್ ರಾಜಾಮೌಳಿ ಹಾಗೂ ಇಡೀ ಚಿತ್ರತಂಡಕ್ಕ ನಾನು ಕೃತಜ್ಞತೆ ಹೇಳಲು ಬಯಸುತ್ತೇನೆ. ನನ್ನ ಜೊತೆಯಲ್ಲಿ ಇದ್ದ ಎಲ್ಲ ಅಭಿಮಾನಿಗಳಿಗೆ ಪ್ರೀತಿಯ ಅಪ್ಪುಗೆ ನೀಡಲು ಇಷ್ಟಪಡುತ್ತೇನೆ. ಬಾಹುಬಲಿ ಚಿತ್ರವನ್ನು ಬೆಂಬಲಿಸಿ ಅದನ್ನು ಸೂಪರ್ ಹಿಟ್ ಮಾಡಿದಕ್ಕೆ ಧನ್ಯವಾಗಳು ಎಂದು ಪೋಸ್ಟ್ ಮಾಡಿದ್ದಾರೆ.

ಬಾಹುಬಲಿ-2 ಚಿತ್ರವನ್ನು ಎಸ್.ಎಸ್ ರಾಜಾಮೌಳಿ ನಿರ್ದೇಶನ ಮಾಡಿದ್ದು, ಪ್ರಭಾಸ್ ಜೊತೆ ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ಮುಂತಾದ ದೊಡ್ಡ ತಾರಾಗಣ ಚಿತ್ರ ಹೊಂದಿತ್ತು.

Leave a Reply

Your email address will not be published. Required fields are marked *