Saturday, 16th February 2019

ಶಟರ್ ಮುರಿದು 7 ಲಕ್ಷ ರೂ. ಮೌಲ್ಯದ ಟಿವಿ, ಮೊಬೈಲ್ ಕಳವು

– ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ರಾಯಚೂರು: ಮನೆಯೊಂದರಲ್ಲಿ ಅಪಾರ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಬೆನ್ನಲ್ಲೇ ಈಗ ಟಿವಿ ಹಾಗೂ ಮೊಬೈಲ್ ಶೋ ರೂಂನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದಿರುವ ಘಟನೆ ನಗರದ ಅರಬ್ ಮೊಹಲ್ಲಾ ವೃತ್ತದ ಬಳಿ ನಡೆದಿದೆ.

ಕಳೆದ ಒಂದು ತಿಂಗಳಿಂದ ನೆಮ್ಮದಿಯಿಂದ ಇದ್ದ ರಾಯಚೂರು ನಗರ ಈಗ ಪುನಃ ಕಳ್ಳರ ಕಾಟಕ್ಕೆ ಭಯಭೀತವಾಗಿದೆ. ಕಳೆದ ರಾತ್ರಿ ಟಿವಿ, ಮೊಬೈಲ್ ಶೋ ರೂಂಗೆ ಖದೀಮರು ಕನ್ನ ಹಾಕಿದ್ದಾರೆ. ಶುಕ್ರವಾರ ರಾತ್ರಿ ಝೆಡ್ ಆನ್ ಪವರ್ ಶೋ ರೂಂನಲ್ಲಿ ಕಳ್ಳತನವಾಗಿದ್ದು, 7 ಲಕ್ಷ ರೂ. ಮೌಲ್ಯದ ಟಿವಿ ಹಾಗೂ ಮೊಬೈಲ್‍ಗಳನ್ನು ದೋಚಲಾಗಿದೆ. ಈ ವೇಳೆ 20 ಸಾವಿರ ರೂ ನಗದು ಹಾಗೂ ಮೊಬೈಲ್ ದೋಚಿರುವ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾತ್ರಿ ಶೋ ರೂಂ ಮುಚ್ಚಿದ ಮೇಲೆ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಇಡೀ ಶೋ ರೂಂ ತುಂಬಾ ಓಡಾಡಿದ್ದು ಕೈಗೆ ಸಿಕ್ಕ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆ. ಘಟನೆ ಕುರಿತು ಸದರ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ಮುಂದುವರಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *