Saturday, 16th February 2019

Recent News

ಇನ್ನೋವಾ ಕಾರಲ್ಲಿ ಬಂದು ಆಕಳು ಕದ್ದೊಯ್ದ ಕಳ್ಳರು!

ದಾವಣಗೆರೆ: ಬೀಡಾಡಿ ಆಕಳನ್ನು ಕಳ್ಳರು ಇನ್ನೋವಾ ಕಾರಿನಲ್ಲಿ ಕದ್ದೊಯ್ದ ಘಟನೆ ನಗರದ ವಿನೋಬಾನಗರ 2 ನೇ ಕ್ರಾಸ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜುಲೈ 12ರ ಮಧ್ಯರಾತ್ರಿ ಕಳ್ಳರು ವಿನೋಬಾನಗರದ 2ನೇ ಕ್ರಾಸ್ ನಲ್ಲಿ ಇನ್ನೋವಾ ಕಾರಲ್ಲಿ ಬಂದಿದ್ದಾರೆ. ಈ ವೇಳೆ ಕಾರನ್ನು ನಿಲ್ಲಿಸಿಕೊಂಡು ಒಂದು ಆಕಳನ್ನು ಕಾರಿನ ಡಿಕ್ಕಿಯಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಈ ಎಲ್ಲಾ ಘಟನೆಯು ಹತ್ತಿರದ ಸಿಸಿಟಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಳ್ಳರು ಬೀಡಾಡಿ ಆಕಳನ್ನು ಕಸಾಯಿ ಖಾನೆಗೆ ಮಾರಾಟ ಮಾಡಲು ಕದ್ದೊಯ್ದಿರಬಹುದೆಂದು ಅನುಮಾನ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:  ಕಳ್ಳತನ ಮಾಡಿದ್ದ ದನಗಳನ್ನ ಸಾಗಿಸುತ್ತಿದ್ದ ಕಾರುಗಳನ್ನು ಪುಡಿಪುಡಿ ಮಾಡಿದ ಗ್ರಾಮಸ್ಥರು

Leave a Reply

Your email address will not be published. Required fields are marked *