ಬಡವನೆಂದು ತಿಳಿದಿದ್ದರೆ ನಾವು ಕಳ್ಳತನ ಮಾಡುತ್ತಿರಲಿಲ್ಲ- ಕ್ಷಮಾಪಣಾ ಪತ್ರ ಬರೆದ ಕಳ್ಳರು

Advertisements

ಲಕ್ನೋ: ಕದ್ದಿರುವ ವಸ್ತುಗಳನ್ನು ವಾಪಸ್ ಮಾಡಿದ ಕಳ್ಳರು ಕ್ಷಮಾಪಣೆಯ ಪತ್ರವನ್ನು ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.

Advertisements

ಚಂದ್ರಾಯಕ್ ಗ್ರಾಮದ ನಿವಾಸಿ ದಿನೇಶ್ ತಿವಾರಿ ಬಂದಾ ಜಿಲ್ಲೆಯ ಗ್ರಾಮದ ಬಳಿ ವೆಲ್ಡಿಂಗ್ ಶಾಪ್ ಆರಂಭಿಸಲು ಸಿದ್ಧತೆ ನಡೆಸಿದ್ದರು. ಸಾಲ ಮಾಡಿ ಅಂಗಡಿಗೆ ಕೆಲವು ವಸ್ತುಗಳನ್ನು ಖರೀದಿಸಿದ್ದರು.  ಅಂಗಡಿಯ ಬೀಗ ಒಡೆದು ಒಳನುಗ್ಗಿರುವ ಕಳ್ಳರು ವೆಲ್ಡಿಂಗ್ ಯಂತ್ರ, ಕಟ್ಟರ್ ಹೀಗೆ ಹಲವು ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಡಿ.27 ರಂದು ಪರಿಹಾರ ವಿತರಣೆ

Advertisements

ಪತ್ರದಲ್ಲಿ ಏನಿದೆ?: ನಿಮ್ಮ ಅಂಗಡಿಯ ಬಗ್ಗೆ ನಮಗೆ ತಪ್ಪಾಗಿ ಮಾಹಿತಿ ನೀಡಲಾಗಿತ್ತು. ಮಾಲೀಕರು ಶ್ರೀಮಂತರಾಗಿದ್ದು, ಅಲ್ಲಿ ನಮಗೆ ಹಲವು ಬೆಲೆಬಾಳುವ ವಸ್ತುಗಳು ಸಿಗುತ್ತವೆ ಎಂದು ಹೇಳಿ ನಿಮ್ಮ ಅಂಗಡಿಗೆ ನುಗ್ಗಿದ್ದೇವೆ, ಕ್ಷಮಿಸಿ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಪತ್ರದ ಜೊತೆಗೆ ಕದ್ದಿರುವ ವಸ್ತುಗಳನ್ನು ತಂದಿಟ್ಟು ಹೋಗಿದ್ದರು.

ನಡೆದಿದ್ದೇನು?: ಅಂಗಡಿಯಲ್ಲಿ ವಸ್ತುಗಳು ಕಳುವಾದ ನಂತರ ಜಿಲ್ಲೆಯ ಚಂದ್ರಾಯಕ್ ಗ್ರಾಮದ ನಿವಾಸಿ ತಿವಾರಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಕಳುವಾಗಿದ್ದ ವಸ್ತುಗಳಿಗಾಗಿ ಹುಡುಕಾಟವನ್ನು ಪೊಲೀಸರು ಪ್ರಾರಂಭಿಸಿದ್ದರು. ಈ ಘಟನೆ ನಡೆದು ಮೂರು ದಿನದ ನಂತರ ಗ್ರಾಮದ ನಿವಾಸಿಯೊಬ್ಬರು ಸಮೀಪದ ಹೊಲಗಳಲ್ಲಿ, ವೆಲ್ಡಿಂಗ್ ಯಂತ್ರಗಳು ಬಿದ್ದಿವೆ ಎಂದು ತಿಳಿಸಿದ್ದಾರೆ. ದನ್ನೂ ಓದಿ: ಸಿಲಿಂಡರ್ ಸ್ಪೋಟ – ಬೆಂಗಳೂರಿನ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ

Advertisements

ತಿವಾರಿ ಹೊಲಕ್ಕೆ ಹೋಗಿ ನೋಡಿದಾಗ ಅವರ ಅಂಗಡಿಯಲ್ಲಿ ಕದ್ದಿದ್ದೆಲ್ಲ ವಸ್ತುಗಳು ಅಲ್ಲಿ ಇದ್ದವು. ಎಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಹಗ್ಗದಿಂದ ಕಟ್ಟಲಾಗಿತ್ತು. ಅಲ್ಲದೇ ಅಲ್ಲೇ ಒಂದು ಪತ್ರ ಕೂಡ ಇತ್ತು. ಇದರಲ್ಲಿ ಕಳ್ಳರು ಕದ್ದಿದ್ದಕ್ಕಾಗಿ ತಿವಾರಿಯವರಲ್ಲಿ ಕ್ಷಮೆಯಾಚಿಸಿದ್ದರು. ಅಲ್ಲದೇ ನೀವು ಬಡವನೆಂದು ತಿಳಿದಿದ್ದರೆ ನಾವು ಹೀಗೆ ಮಾಡುತ್ತಿರಲಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿತ್ತು ಎಂದು ತಿಳಿದು ಬಂದಿದೆ.

Advertisements
Exit mobile version