Connect with us

Bengaluru City

ಪೆಟ್ರೋಲ್ ಬಂಕ್‍ನಲ್ಲಿ ರಾತ್ರಿ ನಿದ್ದೆ ಮಾಡುವ ಮುನ್ನ ಎಚ್ಚರ!

Published

on

ಬೆಂಗಳೂರು: ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ನಲ್ಲಿ ನಿದ್ದೆ ಮಾಡುವ ಸಿಬ್ಬಂದಿ ಮತ್ತು ಮಾಲೀಕರು ಎಚ್ಚರವಾಗಿರಿ. ಯಾಕೆಂದರೆ ಕದ್ದು ಡೀಸೆಲ್ ಹಾಕಿಕೊಂಡು ಹೋಗುವ ಕಾರ್ ಚಾಲಕರಿದ್ದಾರೆ.

ಬೆಂಗಳೂರಿನ ಬಾಗಲಗುಂಟೆಯಲ್ಲಿ ಮಂಜುನಾಥ್ ಅವರಿಗೆ ಸೇರಿದ ತ್ರಿವೇಣಿ ಪೆಟ್ರೋಲ್ ಬಂಕ್‍ನಲ್ಲಿ ಈ ಘಟನೆ ನಡೆದಿದೆ. ಇಂದು ನಸುಕಿನ ಜಾವ ಸುಮಾರು 3.16ಕ್ಕೆ ಕೆಎ 01 ಎಬಿ 2339 ನೋಂದಣಿಯ ಇಂಡಿಕಾ ಕಾರು ತ್ರಿವೇಣಿ ಪೆಟ್ರೋಲ್ ಬಂಕ್ ಬಳಿ ಬಂದಿದೆ.

ಈ ವೇಳೆ ಪೆಟ್ರೋಲ್ ಬಂಕ್‍ನಲ್ಲಿ ಸಿಬ್ಬಂದಿ ನಿದ್ದೆ ಮಾಡುತ್ತಿದ್ದರು. ಇದೇ ಸಮಯ ನೋಡಿಕೊಂಡು ಚಾಲಕ ತನ್ನ ಕಾರಿಗೆ ಡೀಸೆಲ್ ತುಂಬಿಸಿಕೊಂಡಿದ್ದಾನೆ. ಕಾರಿನ ಚಾಲಕನನ್ನು ತುಮಕೂರು ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಕಾರಿಗೆ ಡೀಸೆಲ್ ತುಂಬಿಸಿಕೊಂಡ ಬಳಿಕ ಚಾಲಕ ರಮೇಶ್ ತರಾತುರಿಯಲ್ಲಿ ಕಾರ್ ಸ್ಟಾರ್ಟ್ ಮಾಡಿದ್ದಾನೆ.

ಅಷ್ಟೊತ್ತಿಗೆ ನಿದ್ದೆಯಿಂದ ಎದ್ದ ಬಂಕ್ ಸಿಬ್ಬಂದಿ ಓಡಿ ಬಂದು ಬಂಕ್‍ನಿಂದಾಚೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾನೆ. ಆದರೂ ರಮೇಶ್ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಆದರೆ ಬಂಕ್ ಸಿಬ್ಬಂದಿ ಕಾರಿನ ಬಾನೆಟ್ ಮೇಲೆ ಹತ್ತಿ ನಿಂತಿಕೊಂಡಿದ್ದಾನೆ. ಕೊನೆಗೆ ಸಿಬ್ಬಂದಿ ಕಾರ್ ಚಾಲಕ ರಮೇಶನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.

ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.