Connect with us

Davanagere

ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ಅಪಾಯವಿಲ್ಲ: ಡಾ.ಕೆ ಸುಧಾಕರ್

Published

on

Share this

– ದಾವಣಗೆರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣ

ದಾವಣಗೆರೆ: ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ತಜ್ಞರ ವರದಿಗಳಿವೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ಜಿಲ್ಲಾಸ್ಪತ್ರೆಯ ಭೇಟಿಗಿಂತ ಮೊದಲು ಜಿಎಂಐಟಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ತಜ್ಞರ ವರದಿ ಹೇಳುತ್ತಿದ್ದು, ಹಾಗಂತ ಯಾವ ಪೋಷಕರು ಮೈಮರೆಯುವಂತಿಲ್ಲ. ಲಾಕ್‍ಡೌನ್ ಸಡಿಲಿಕೆ ಆಗಿದೆ ಎಂದು ಜನರು ಕೂಡ ಮೈಮೆರಯುವಂತಿಲ್ಲ. ಪ್ರತಿಯೊಬ್ಬರು ಎರಡನೇ ಡೋಸ್ ಪಡೆಯುವವರೆಗೂ ಎಲ್ಲರೂ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈಗಾಗಲೇ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್‍ಗಳ ಸಂಖ್ಯೆ ಹೆಚ್ಚಿದ್ದು, ಕೇರಳದಲ್ಲಿ ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಕೇಸ್ ಬರುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಗಡಿಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ, ಕರ್ನಾಟಕದಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಮಳೆಗಾಲದ ಅಧಿವೇಶನದಲ್ಲಿ 20 ಮಸೂದೆ ಮಂಡನೆ: ಪ್ರಹ್ಲಾದ್ ಜೋ

ಶೇ 1.5ರ ದರದಲ್ಲಿ ಕೇಸ್‍ಗಳು ದಾಖಲಾಗುತ್ತಿವೆ. ಪ್ರತಿದಿನ 1.50 ಲಕ್ಷದಷ್ಟು ಟೆಸ್ಟಿಂಗ್ ಮಾಡುತ್ತಿದ್ದೇವೆ. ಸಧ್ಯ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಎರಡನೇ ಪ್ಯಾಕೇಜ್‍ನಲ್ಲಿ ಕರ್ನಾಟಕಕ್ಕೆ 1500 ಕೋಟಿ ಬರುತ್ತಿದ್ದು, ಮೂರನೇ ಅಲೆ ಸಂಭ್ಯಾವದ ಹಿನ್ನಲೆಯಲ್ಲಿ ದೊರೆಯುತ್ತಿರುವ ವಿಶೇಷ ಪ್ಯಾಕೇಜ್ ಇದಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರ, ಪಿಹೆಚ್‍ಸಿಗಳಲ್ಲಿ ಮಕ್ಕಳ ವಿಶೇಷ ವಾರ್ಡ್ ಸೇರಿದಂತೆ ವಿವಿಧ ಸೌಲಭ್ಯವು ಕಲ್ಪಿಸಲು ಹಣ ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್ – ದಿಗ್ಗಜರು ಬೆರಗು

ದಾವಣಗೆರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಈ ಕುರಿತಾಗಿ ಪರಮಾರ್ಶೆ ಮಾಡಲಿಕ್ಕೆ ನಾನು ಇಂದು ದಾವಣಗೆರೆಗೆ ಬಂದಿದ್ದು, ದಾವಣಗೆರೆ ಅಲ್ಲದೇ 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜ್ ನಿರ್ಮಾಣ ಆಗಲಿದೆ. ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಸರ್ಕಾರದಿಂದ ಕಾಲೇಜ್ ಸ್ಥಾಪನೆಗೆ ನಿರ್ಧಾರಿಸಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಕಾಲೇಜ್ ನಿರ್ಮಾಣ ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement