Connect with us

Bellary

ಕಳ್ಳತನಕ್ಕೆ ಬಂದವರು ಯುವಕನ ಕೊಲೆ ಮಾಡಿದ್ರು

Published

on

ಬಳ್ಳಾರಿ: ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ತಾಲೂಕಿನ ಹಂದ್ಯಾಳ ಗ್ರಾಮದಲ್ಲಿ ನಡೆದಿದೆ.

ಹಂದ್ಯಾಳ ಗ್ರಾಮದ ನಿವಾಸಿ ಹುಲುಗಪ್ಪ(21) ಮೃತ ದುರ್ದೈವಿ. ಶನಿವಾರದಂದು ಹುಲುಗಪ್ಪ ಮನೆಗೆ ಕಳ್ಳನಕ್ಕೆ ಬಂದ ಖದೀಮರು ಈ ಕೃತ್ಯವೆಸಗಿದ್ದಾರೆ. ತಡರಾತ್ರಿ ಮನೆಗೆ ನುಗ್ಗಿದ್ದ ಕಳ್ಳರು ಹುಲುಗಪ್ಪ ತಾಯಿ ಗಾದಿಲಿಂಗಮ್ಮ ಅವರ ಚೈನ್ ಕದ್ದಿದ್ದಾರೆ. ಬಳಿಕ ಮನೆಯ ಹೊರಗಡೆ ಮಲಗಿದ್ದ ಯುವಕನ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಕೊಲೆ ಮಾಡಲು ನಿಖರ ಕಾರಣವೇನು ಎನ್ನುವುದರ ಬಗ್ಗೆ ಮಾಹಿತಿ ದೊರಕಿಲ್ಲ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.