Connect with us

Crime

ಶಿವಮೊಗ್ಗದಲ್ಲಿ ಸಾಲು ಸಾಲು ದರೋಡೆ- ಯುಪಿ ಮೂಲದ ಆರು ಜನರ ಬಂಧನ

Published

on

Share this

ಶಿವಮೊಗ್ಗ: ನಗರದಲ್ಲಿ ಹಲವು ದರೋಡೆ, ಕಳ್ಳತನ, ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಉತ್ತರ ಪ್ರದೇಶದ ಮೀರತ್ ನಗರದ 6 ಮಂದಿ ದರೋಡೆಕೋರರು ಹಾಗೂ ಸರಗಳ್ಳರನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಫೈಸಲ್, ಸಲ್ಮಾನ್, ಆಶೀಸ್ ಕುಮಾರ್, ಮೆಹತಾಬ್, ಸಲ್ಮಾನ್ ಹಾಗೂ ಮಹಮ್ಮದ್ ಚಾಂದ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ 2 ಪಿಸ್ತೂಲ್, 12 ಜೀವಂತ ಗುಂಡುಗಳು, 1 ದ್ವಿಚಕ್ರ ವಾಹನ ಸೇರಿದಂತೆ ಸುಮಾರು 9.31 ಲಕ್ಷ ರೂ. ಮೌಲ್ಯದ 213.20 ಗ್ರಾಂ. ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು 2019ರಲ್ಲಿ ಶಿವಮೊಗ್ಗ ನಗರದ ಕೋಟೆ ಠಾಣೆ ಹಾಗೂ ಜಯನಗರ ಠಾಣಾ ವ್ಯಾಪ್ತಿಯಲ್ಲಿ 4 ಕಳ್ಳತನ, 2020ರಲ್ಲಿ 1 ದರೋಡೆ ಮತ್ತು 5 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಹಲವು ಬಾರಿ, ದರೋಡೆ, ಕಳ್ಳತನ ನಡೆಸಿದರೂ ಖದೀಮರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ತಲೆ ಮರೆಸಿಕೊಂಡು ತಿರುಗುತ್ತಿದ್ದರು. ಇದೀಗ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement