Districts

ಕುಖ್ಯಾತ ಮನೆ ಕಳ್ಳರ ಬಂಧನ- ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ

Published

on

Share this

ಗದಗ: ಲಕ್ಷ್ಮೇಶ್ವರ ಹಾಗೂ ಮುಳಗುಂದ ಪಟ್ಟಣದಲ್ಲಿ ನಡೆದಿದ್ದ ಸರಣಿ ಮನೆ ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು, ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಲಕ್ಷ್ಮೇಶ್ವರ ಪಟ್ಟಣದ ಸಂತೋಷ ಮನೋಹರ ಗಬ್ಬೂರು ಹಾಗೂ ರಶೀದ್ ಇಸ್ಮಾಯಿಲ್ ಸಾಬ್ ಮುಳಗುಂದ ಎಂದು ಗುರುತಿಸಲಾಗಿದೆ. ಇವರು 2021ರ ಜನವರಿಯಲ್ಲಿ ಮುಳಗುಂದ ಹಾಗೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೀಗ ಮುರಿದು ಸರಣಿ ಮನೆ ಕಳ್ಳತನ ಮಾಡಿದ್ದರು. ಇದನ್ನು ಬೇಧಿಸಿದ ಲಕ್ಷ್ಮೇಶ್ವರ ಪೊಲೀಸರು ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಒಂದು ಮೊಬೈಲ್ ಹಾಗೂ 20 ಸಾವಿರ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಲೋನ್ ಕೊಡುವುದಾಗಿ ಖಾಸಗಿ ನೌಕರನಿಗೆ ವಂಚನೆ- ಲಕ್ಷಾಂತರ ರೂ. ಪಂಗನಾಮ

ಎಸ್‍ಪಿ ಯತೀಶ್ ಎನ್, ಡಿವೈಎಸ್‍ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ, ಸಿಪಿಐ ವಿಕಾಸ್, ಪಿ.ಲಮಾಣಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‍ಐಗಳಾದ ಡಿ.ಪ್ರಕಾಶ್, ಪಿ.ಎಮ್ ಬಡಿಗೇರ, ಎಎಸ್‍ಪಿ ಗುರುರಾಜ್ ಬೂದಿಹಾಳ ಸಿಬ್ಬಂದಿಗಳಾದ ಎಮ್.ಬಿ ವಡ್ಡಟ್ಟಿ, ಮಾರುತಿ ಲಮಾಣಿ, ಚಂದ್ರು ಕಾಕನೂರು, ಎಸ್.ಎಸ್ ಯರಗಟ್ಟಿ, ಎನ್.ಡಿ ಹುಬ್ಬಳ್ಳಿ ಪಾಲ್ಗೊಂಡಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement