Connect with us

Crime

ಮನೆ ಬಾಗಿಲು ಮುರಿದು ಕಳ್ಳತನ-ಮೂವರು ಬಂಧನ

Published

on

Share this

ಶಿವಮೊಗ್ಗ : ಮನೆಗಳ್ಳತನ ನಡೆಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ತುಂಗಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮಹಮ್ಮದ್ ಅಸ್ಲಾಂ (19), ಸಾದಿಕ್ (18), ರೋಷನ್ ಕುಮಾರ್(21) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಜೂ.28 ರಂದು ನಗರದ ಗುತ್ಯಪ್ಪ ಕಾಲೋನಿಯ 3 ನೇ ಕ್ರಾಸ್‍ನ ನಿವಾಸಿ ವಿನಾಯಕ ಎಂಬುವವರ ಮನೆ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ 27 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ನಟಿಗೆ ಲೈಂಗಿಕ ಕಿರುಕುಳ- ನಟ ಪ್ರಚೀನ್ ಅರೆಸ್ಟ್

ಘಟನೆ ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಂದ 1 ಲಕ್ಷ ರೂ ಮೌಲ್ಯದ 27 ಗ್ರಾಂ ಬಂಗಾರದ ಸರವನ್ನ ಮತ್ತು ಕೃತ್ಯಕ್ಕೆ ಬಳಸಿದ ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ. ಮೂವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement