Connect with us

Chamarajanagar

ಶೋಕಿಗಾಗಿ ಕಳ್ಳತನಕ್ಕಿಳಿದಿದ್ದ ಐವರು ಯುವಕರ ಬಂಧನ

Published

on

ಚಾಮರಾಜನಗರ: ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಕೊಳ್ಳೇಗಾಲ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಜುಲೈ 23ರಂದು ಮನೆ ಕಳ್ಳತನ ಮಾಡಿ ಕೊಳ್ಳೇಗಾಲವನ್ನೆ ಬೆಚ್ಚಿಬೀಳಿಸಿದ್ದ ಖತರ್ನಾಕ್ ಖದೀಮರನ್ನು ಕೊಳ್ಳೇಗಾಲ ಪಟ್ಟಣ ಪೋಲಿಸರು ಬಂಧಿಸಿದ್ದಾರೆ. ಮಂಜುನಾಥ ಬಡವಾಣೆಯ ನಿವಾಸಿ ಶೀವು (29), ಆಲ್ಕೆರೆ ಅಗ್ರಹಾರ ಗ್ರಾಮದ ನಿಂಗರಾಜು(29), ರಂಗಸ್ವಾಮಿ(23), ಕುಮಾರ್(31), ಮದ್ದೂರಿನ ಟೌನ್ ನಂದಿಶ್(26) ಬಂಧಿತ ಆರೋಪಿಗಳು. ಈ ಪ್ರಕರಣದ ಕಾರ್ಯಚರಣೆಯಲ್ಲಿ ಮೊದಲು ಸಿಕ್ಕಿ ಬಿದ್ದ ರೈಲು ಮದ್ದೂರು ಪಟ್ಟಣದ ಮಧು ಅಲಿಯಾಸ್ ಯಾಟೆ ಸದ್ಯ ಜೈಲು ವಾಸದ್ದಲಿದ್ದಾನೆ. ಆರೋಪಿಗಳಿಂದ ಒಟ್ಟು 10.56 ಲಕ್ಷ ರೂ., 8.20 ಲಕ್ಷ ರೂ.ಗಳ ಚಿನ್ನಾಭರಣ, 1 ಕಾರ್, 3 ಬೈಕ್ ಸೇರಿದಂತೆ 8 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಶಿವಕುಮಾರ ಸ್ವಾಮಿ ಬಡಾವಣೆ ಹಾಗೂ ಆಶ್ರಯ ಬಡಾವಣೆಯಲ್ಲಿ ಸರಣಿ ಕಳ್ಳತನ ಮಾಡಿ ತಲೆಮಾರೆಸಿಕೊಂಡಿದ್ದರು.

ಜುಲೈ 23 ರಂದು ಸರಣಿ ಕಳ್ಳತನ ಮಾಡಿ ಕೊಳ್ಳೇಗಾಲವನ್ನೆ ಬೆಚ್ವಿಬೀಳಿಸಿದ್ದ ಈ ಖದೀಮರು ಇದೀಗ ಪೋಲಿಸರ ಅಥಿತಿಯಾಗಿದ್ದಾರೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದಿವ್ಯಾ ಸಾ.ರಾ.ಥಾಮಸ್ ಮಾರ್ಗದರ್ಶನದಂತೆ ಸಿಪಿಐ ಶ್ರೀಕಾಂತ್ ಹಾಗೂ ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ ನೇತೃತ್ವದ ತಂಡ ಈ ಪ್ರಕರಣ ಬೇಧಿಸಿದ್ದು, ಕೊಳ್ಳೇಗಾಲ ಜನರಲ್ಲಿ ಸ್ವಲ್ಪ ಮಟ್ಟಿಗೆ ಆತಂಕ ದೂರಮಾಡಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಸರಣಿ ಕಳ್ಳತನ ಮಾಡಿ ಆತಂಕ ಸೃಷ್ಟಿಸಿದ ಖದೀಮರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 10.56 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳತನಕ್ಕೆ ಮುಂದಾಗುತ್ತಿದ್ದರು. ಶೋಕಿ ಮಾಡಲು ಕಳ್ಳತನ ಆಯ್ಕೆ ಮಾಡಿಕೊಂಡಿರುವ ಇವರು, ಕದ್ದ ಹಣವನ್ನು ಕುಡಿತ, ಮೋಜು ಮಸ್ತಿಗೆ ಬಳಸುತ್ತಿದ್ದರು ಎಂದು ವಿವರಿಸಿದ್ದಾರೆ.

ರಾತ್ರಿ ವೇಳೆ ಗಸ್ತು ಕಾರ್ಯಚರಣೆ ವ್ಯವಸ್ಥಿತವಾಗಿದೆ. ಆದರೂ ಈ ರೀತಿ ಪ್ರಕರಣಗಳು ಪಟ್ಟಣದಲ್ಲಿ ನಡೆಯುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ರಾತ್ರಿ ಪಾಳಿಯವನ್ನು ಇನ್ನಷ್ಟು ಕಠಿಣಗೊಳಿಸಲಾಗುತ್ತದೆ. ಜನರು ಯಾವುದೇ ಆತಂಕ ಪಡುವುದು ಬೇಡ, ಒಂದು ವೇಳೆ ಮನೆ ಬಿಟ್ಟು ಹೊರಗೆ ಹೋಗುವವರು ಠಾಣಾ ಪೋಲಿಸರ ಗಮನಕ್ಕೆ ಮಾಹಿತಿ ನೀಡಬೇಕು. ಮನೆಗಳಿಗೆ ಸಿಸಿಟಿವಿ ಅಳವಡಿಕೆ ಆಗಿದ್ದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *