Connect with us

Bengaluru City

ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿ ತೋರಿಸುತ್ತದೆ: ಡಿಕೆಶಿ ಕಿಡಿ

Published

on

ಬೆಂಗಳೂರು: ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿಯನ್ನ ತೋರಿಸುತ್ತೆ. ಪೊಲೀಸರ ಸಮ್ಮುಖದಲ್ಲಿ ಹೆಣ್ಣುಮಗಳನ್ನು ಎಳೆದಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಹೆಣ್ಣು ಮಗಳನ್ನ ಎಳೆದಾಡಿದ್ದಾರೆ. ಈ ಘಟನೆ ಸರಿಯೋ ತಪ್ಪೋ ಅನ್ನೋದನ್ನ ಮುಖ್ಯಮಂತ್ರಿಗಳಿಗೆ ಬಿಟ್ಟು ಬಿಡುತ್ತೇನೆ. ಈ ಪ್ರಕರಣವನ್ನ ಗಂಭೀರವಾಗಿ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಡಿದು, ಎಳೆದಾಡಿ, ಮೆಟ್ಟಿಲಿನಿಂದ ತಳ್ಳಿದ್ರು- ಪುರಸಭೆ ಸದಸ್ಯೆ ಕಣ್ಣೀರು

ಬೇರೆ ಪ್ರಕರಣದಲ್ಲಿ ಪೊಲೀಸರು ಕೇಸ್ ಹಾಕ್ತಾರೆ. ಆದರೆ ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಯಾರಿಗೆ ಏನು ಬೇಕಾದರೂ ಮಾಡಬಹುದು ಎಂಬುದು ಬಿಜೆಪಿಗೆ ಅಭ್ಯಾಸ ಮತ್ತು ಹವ್ಯಾಸವಾಗಿದೆ. ಲೀಡರ್, ಶಾಸಕರು ಯಾರ ಕಂಟ್ರೋಲ್‍ನಲ್ಲಿ ಇಲ್ಲ ಕಾರ್ಪೋರೇಟ್ ಕೌನ್ಸಿಲರ್ ಎಲ್ಲಾ ಕಡೆ ನಡೆಯುತ್ತದೆ. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ನಾವು ಅದೇನು ಮಾಡುತ್ತಾರೆ ಅನ್ನೋದನ್ನು ನೋಡುತ್ತೇನೆ. ಈ ಕುರಿತಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಅದೇನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡಿ ಮಾತನಾಡುತ್ತೇನೆ ಎಂದು ಗರಂ ಆದರು. ಇದನ್ನೂ ಓದಿ:ನಾನು ಮಹಿಳೆಯ ರಕ್ಷಣೆಗೆ ಮುಂದಾಗಿದ್ದೆ- ಅಸಭ್ಯ ವರ್ತನೆಗೆ ಸಿದ್ದು ಸವದಿ ಸಮರ್ಥನೆ

ಇದೇ ವೇಳೆ ಭೀಮಾ ನಾಯ್ಕ್ ತೊಡೆ ತಟ್ಟಿದ ವಿಚಾರವಾಗಿ ಮಾತನಾಡಿದ ಡಿಕೆಶಿ, ಈ ವಿಚಾರದಲ್ಲಿ ಸಹ ಪ್ರತಿಪಕ್ಷ ನಾಯಕರು ಮಾತನಾಡಿದ್ದಾರೆ. ಆ ವಿಚಾರಕ್ಕೆ ನಾನು ಪ್ರತಿಕ್ರಿಯಿಸಲ್ಲ ಎಂದರು. ಇದನ್ನೂ ಓದಿ: ಪುರಸಭೆಯ ಮಹಿಳಾ ಸದಸ್ಯೆಯನ್ನು ಎಳೆದಾಡಿ ಬಿಜೆಪಿ ಶಾಸಕ, ಬೆಂಬಲಿಗರ ಅಸಭ್ಯ ವರ್ತನೆ

Click to comment

Leave a Reply

Your email address will not be published. Required fields are marked *

www.publictv.in