ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ ವಿವೇಕ ಶಾಲೆಗಳ ಬಣ್ಣ

Advertisements

ಗದಗ: ವಿವೇಕ ಶಾಲೆಗಳಿಗೆ ಕೇಸರಿ ಬಣ್ಣ (Orange Colour) ಹಚ್ಚುವ ಕುರಿತು ವಿವಾದದ ಈಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (B.C Nagesh) ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಸರಿ ಬಣ್ಣ ಹೌದು ಅಲ್ವೋ.? ಕೇಸರಿ ಬಣ್ಣ ಚೆನ್ನಾಗಿದೆ ಅಂತಾ ಆರ್ಕಿಟೆಕ್ಟ್ ಹೇಳಿದ್ರೆ ಕೇಸರಿ ಹಾಕ್ತೀವಿ ಅಂದ್ರು. ಬಣ್ಣ, ಕಿಟಕಿ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲ್ಲ, ಆರ್ಕಿಟೆಕ್ಟ್ ಮೇಲೆ ಬಿಡ್ತೀವಿ. ಇನ್ನು ಒಂದಿಷ್ಟು ಜನಕ್ಕೆ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲೂ ಕೆಸರಿ ಇದೆ. ಅದನ್ನ ಯಾಕೆ ಬಿಟ್ಕೊಂಡಿದ್ದಾರೆ. ಪೂರ್ತಿ ಹಸಿರು ಮಾಡ್ಕೊಂಬಿಡ್ಲಿ ಅಂತ ಹೆಸರು ಹೇಳದೇ ಕಾಂಗ್ರೆಸ್ (Congress) ಗೆ ಟಾಂಗ್ ನೀಡಿದರು.

Advertisements

ಟಿಪ್ಪು ಸುಲ್ತಾನ್ ಮೂರ್ತಿ ನಿರ್ಮಾಣ ವಿಷಯಕ್ಕೆ ಪ್ರತಿಕ್ರಿಯೆ ನೀಡಿದರು. ಮೈಸೂರಲ್ಲಿ ಟಿಪ್ಪು ಮೂರ್ತಿ (Tippu Statue) ನಿರ್ಮಾಣ ಮಾಡಿದರೆ ಜನವೇ ನಿರ್ಧಾರ ಮಾಡ್ತಾರೆ ಎಂದ್ರು. ಟಿಪ್ಪು ನಾಟಕಕ್ಕೆ ವಿರೋಧ ವಿಷಯವಾಗಿ ಜನಕ್ಕೆ ವಿರೋಧ ಮಾಡುವ ಅಭ್ಯಾಸ ಇದೆ. ಸತ್ಯ ಹೇಳುವುದಕ್ಕೆ ಸಹಿಸಲ್ಲ. ಸುಳ್ಳಿನ ಆಧಾರದಲ್ಲಿ ಕೆಲವರು ತಜ್ಞರಾಗಿದ್ದಾರೆ. ಸುಳ್ಳು ಹೇಳಿಕೊಂಡೇ ಕೆಲ ರಾಜಕೀಯ ಪಕ್ಷಗಳು ಬದುಕಿವೆ. ನಿಜ ಹೊರ ಬರೋದ್ರಿಂದ ಕೆಲವರ ಭವಿಷ್ಯಕ್ಕೆ ಕುತ್ತಾಗುತ್ತೆ. ದೇಶ ಕಂಡಂತ ಅತ್ಯಂತ ಶ್ರೇಷ್ಠ ಅಂತಾ ಟಿಪ್ಪು ಬಗ್ಗೆ ಓದಿದ್ದೇವು. ಈಗ ಟಿಪ್ಪು ಸತ್ಯ ಗೊತ್ತಾಗ್ತಿದೆ.

Advertisements

ಶ್ರೀರಂಗಮಟ್ಟಣದ ಆಂಜನೇಯ ದೇವಸ್ಥಾನ (Aanjaneya Temple) ಒಡೆದು ಮಸೀದಿ ಕಟ್ಟಿದ್ದು ಗೊತ್ತಾಯ್ತು. ಪಹಣಿಯಲ್ಲಿ ಇರೋದು ಪರ್ಷಿಯನ್ ಪದ ಅಂತಾ ಗೊತ್ತಾಯಿತು. ಪಹಣಿ ಅಂದ್ರೆ ಕನ್ನಡದ ಪದ ಅನ್ಕೊಂಡಿದ್ವಿ. ಶಿರಸ್ತೆದಾರ ಅಂದ್ರೆ ಕನ್ನಡ ಅನ್ಕೊಂಡು ಬಿಟ್ಟಿದ್ವಿ. ಕನ್ನಡವನ್ನ ಕೊಂದಿದ್ದು ಟಿಪ್ಪು ಅಂತ ಈಗ ಗೊತ್ತಾಗ್ತಿದೆ, ಅದಯ ಟಿಪ್ಪು ಸುಲ್ತಾನ್ ಬರೆದ ಪತ್ರದ ಮೂಲಕವೇ ಗೊತ್ತಾಗ್ತಿದೆ ಎಂದ್ರು. ಇದನ್ನೂ ಓದಿ: ಎಷ್ಟೋ ಸಲ ಹಸಿದ ಹೊಟ್ಟೆಯಲ್ಲೇ ಮಲಗುತ್ತಿದ್ದ ಬುಡಕಟ್ಟು ಜನಾಂಗದವ ಈಗ ಅಮೆರಿಕದಲ್ಲಿ ವಿಜ್ಞಾನಿ

Advertisements

ದುರಾದೃಷ್ಟ ಅಂದ್ರೆ ಈ ದೇಶದಲ್ಲಿ ಟಿಪ್ಪು, ಕೆಂಪೇಗೌಡರನ್ನ ಹೋಲಿಸಲಾಗ್ತಿದೆ. ಕೆಂಪೇಗೌಡರು ಎಲ್ಲರೂ ಚೆನ್ನಾಗಿರ್ಬೇಕು ಅಂತಾ ಕೆಲಸ ಮಾಡಿದವರು. ದೇಶ ಇನ್ನೂ 100 ವರ್ಷ ಬಿಟ್ಟು ಹೇಗಿರಬೇಕು ಅಂತಾ ಕನಸು ಕಂಡವರು. ಟಿಪ್ಪು ಸುಲ್ತಾನ್ ಏನು ಮಾಡಿದಾನೆ ಅಂತಾ ಗೊತ್ತಿದ್ರೂ ಅವನ್ನ ಇಟ್ಕೊತಾರೆ ಅಂದ್ರೆ ಮಾನಸಿಕತೆ ಅರ್ಥ ಮಾಡ್ಕೊಬೇಕು. ಈ ದೇಶದಲ್ಲಿ ಟಿಪ್ಪು ಬಯಸಿದ ರಾಷ್ಟ್ರ ಆಗ್ಬೇಕು ಅಂತಾ ಹೊರಟಿದ್ದಾರೆ ಎಂದು ಕಿಡಿಕಾರಿದ್ರು. ಈ ವೇಳೆ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಎಮ್.ಎಸ್ ಕರಿಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Live Tv

Advertisements
Exit mobile version