Crime
ಊಟದ ಬಳಿಕ ತಮ್ಮನ ಜೊತೆ ವಾಕ್ ಹೋದವ ಹೆಣವಾದ

– ತಮ್ಮನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಚಂಡೀಗಢ: ಊಟದ ಬಳಿಕ ವಾಕ್ ಹೋದ ಯುವಕ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ಪಾಣಿಪತ್ ನಗರದ ಸೆಕ್ಟರ್ 29ರಲ್ಲಿ ನಡೆದಿದೆ.
24 ವರ್ಷದ ಪ್ರದೀಪ್ ಮೃತ ಯುವಕ. ಸೋಮವಾರ ರಾತ್ರಿ ಊಟದ ಬಳಿಕ ತಮ್ಮನ ಜೊತೆ ವಾಯು ವಿಹಾರಕ್ಕೆ ಪ್ರದೀಪ್ ಬಂದಿದ್ದನು. ಬಿಹೌಲಿಯ ಗ್ಯಾಸ್ ಏಜೆನ್ಸಿ ಬಳಿ ಹಿಂದಿನಿಂದ ಬಂದ ಟಾಟಾ ಇಂಡಿಗೋ ಕಾರ್ ಪ್ರದೀಪ್ಗೆ ಡಿಕ್ಕಿ ಹೊಡೆದಿದೆ. ಆದ್ರೆ ಚಾಲಕ ಕ್ಷಣಾರ್ಧದಲ್ಲಿ ಅಪಘಾತ ಸ್ಥಳದಿಂದ ಕಾರ್ ಸಹಿತ ಎಸ್ಕೇಪ್ ಆಗಿದ್ದಾನೆ. ಇನ್ನು ಪ್ರದೀಪ್ ಜೊತೆಯಲ್ಲಿ ತಮ್ಮನಿಗೂ ಸಣ್ಣ ಪ್ರಮಾಣದ ಗಾಯಗಳಾಗಿವೆ. ಸ್ಥಳೀಯರು ಆಟೋ ಮೂಲಕ ಪ್ರದೀಪ್ ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದದಾಗ ವೈದ್ಯರು ಸಾವನ್ನಪ್ಪಿರುವ ವಿಷಯ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಟ್ರಕ್, ಜೀಪ್ ಡಿಕ್ಕಿ ಭೀಕರ ಅಪಘಾತದಲ್ಲಿ 6 ಸಾವು, 11 ಮಂದಿಗೆ ಗಾಯ
ಮನೆಗೆ ಆಧಾರವಾಗಿದ್ದ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ಕು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಪ್ರದೀಪ್ ಒಂದು ಮಗು ಸಹ ಇದೆ. ಮೂರು ವರ್ಷಗಳ ಹಿಂದೆ ಪ್ರದೀಪ್ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಂದಿನಿಂದ ಮನೆಯ ಜವಾಬ್ದಾರಿ ಪ್ರದೀಪ್ ಮೇಲಿತ್ತು. ಇದನ್ನೂ ಓದಿ: ಬಾಯಿಂದ ಕಚ್ಚಿ 55 ವರ್ಷದ ವ್ಯಕ್ತಿಯ ಮರ್ಮಾಂಗ ಕತ್ತರಿಸಿದ 28ರ ಯುವಕ
