Saturday, 15th December 2018

Recent News

ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ನಡೆಸಿ ನಗದು, ಚಿನ್ನಾಭರಣದೊಂದಿಗೆ ದರೋಡೆಕೋರರು ಎಸ್ಕೇಪ್

ರಾಮನಗರ: ತಡರಾತ್ರಿ ದರೋಡೆಕೋರರ ಗುಂಪೊಂದು ವೈದ್ಯರೊಬ್ಬರ ಮನೆಗೆ ನುಗ್ಗಿ ಹಲ್ಲೆ ನಡೆಸಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ ಘಟನೆ ಜಿಲ್ಲೆಯ ಚನ್ನಪಟ್ಟಣದ ಕುವೆಂಪು ನಗರದಲ್ಲಿ ನಡೆದಿದೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಡಾ.ರಾಜಣ್ಣ ಎಂಬವರ ಮನೆಗೆ ದರೋಡೆಕೋರರು ನುಗ್ಗಿದ್ದಾರೆ. ನಾಲ್ವರು ದರೋಡೆಕೋರರು ವೈದ್ಯರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಟೇಪ್‍ನಿಂದ ಕೈ ಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಸುತ್ತಿ ಮನೆಯಲ್ಲಿದ್ದ ಒಂದೂವರೆ ಲಕ್ಷ ನಗದು, ಚಿನ್ನಾಭರಣ ಹಾಗೂ ಟಿವಿ ದೋಚಿ ಪರಾರಿಯಾಗಿದ್ದಾರೆ.

ಹಲ್ಲೆಗೊಳಗಾದ ವೈದ್ಯ ರಾಜಣ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *