ಚಿತ್ರತಂಡಕ್ಕೆ 400 ಚಿನ್ನದ ಉಂಗುರ ಗಿಫ್ಟ್ ನೀಡಿದ ವಿಜಯ್

ಚೆನ್ನೈ: ತಮಿಳುನಟ ವಿಜಯ್ ಅವರು ತಮ್ಮ ‘ಬಿಗಿಲ್’ ಚಿತ್ರತಂಡಕ್ಕೆ ಒಟ್ಟು 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ.

ವಿಜಯ್ ತಮ್ಮ ಬಹುನಿರೀಕ್ಷಿತ ಬಿಗಿಲ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಚಿತ್ರತಂಡಕ್ಕೆ 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ವಿಶೇಷ ಅಂದರೆ ಚಿನ್ನದ ಉಂಗುರದ ಮೇಲೆ ಬಿಗಿಲ್ ಎಂದು ಬರೆಯಲಾಗಿದೆ.

ಚಿತ್ರತಂಡಕ್ಕೆ ವಿಜಯ್ ಚಿನ್ನದ ಉಂಗುರವನ್ನು ಹಂಚುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಜಯ್ ಅವರ ಈ ಕೆಲಸ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಗಿಲ್ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಉಂಗುರವನ್ನು ನೀಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಮಂಗಳವಾರ ಬಿಗಿಲ್ ಚಿತ್ರದ ಚಿತ್ರೀಕರಣ ಮುಗಿದಿದೆ. ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಈಗ ಎರಡು ದಿನದಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದ್ದು, ಇದೇ ವರ್ಷ ಅಕ್ಟೋಬರ್ 27ರಂದು ಚಿತ್ರ ಬಿಡುಗಡೆ ಆಗಲಿದೆ.

ಈ ಚಿತ್ರದಲ್ಲಿ ವಿಜಯ್ ಸೇರಿದಂತೆ ನಟಿ ನಯನತಾರಾ, ಜಾಕಿ ಶ್ರಾಫ್, ವಿವೇಕ್ ಡೇನಿಯಲ್ ಬಾಲಾಜಿ, ಆನಂದ್‍ರಾಜ್, ಇಂದುಜಾ ರವಿಚಂದ್ರನ್, ವರ್ಷ ಬೋಲಮ್ಮ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *