ದಳಪತಿಯ ಬೀಸ್ಟ್ ಎದುರಿಗೆ ಯಶ್ ನಟನೆ ಕೆಜಿಎಫ್ 2

By
2 Min Read

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ಖ್ಯಾತ ನಟಿ ಪೂಜಾ ಹೆಗ್ಡೆ ಅಭಿನಯದ `ಬೀಸ್ಟ್’ ಸಿನಿಮಾವು ಇದೇ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ.

ದಳಪತಿ ವಿಜಯ್ ಅವರ ಈ ಹಿಂದಿನ ಚಿತ್ರ `ಮಾಸ್ಟರ್’ ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿತ್ತು. ಅಪರಾಧ ಚಟುವಟಿಕೆಗಳಿಕೆ ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಉತ್ತಮ ಸಂದೇಶ ನೀಡಿದ ಈ ಚಿತ್ರವು ಬಾಕ್ಸ್ ಆಫೀಸ್‍ನಲ್ಲೂ ಸದ್ದು ಮಾಡಿತ್ತು. ಕೋವಿಡ್ ಕಾರಣದಿಂದಾಗಿ ಶೇ.50ರಷ್ಟು ಸಿನಿಮಾ ಪ್ರದರ್ಶನಕ್ಕೆ ಅವಕಾಶವಿದ್ದ ಸಂದರ್ಭದಲ್ಲೂ ಈ ಸಿನಿಮಾ ದೊಡ್ಡ ಹೆಜ್ಜೆಯನ್ನಿರಿಸಿತ್ತು. ಇದೀಗ ಬಹುನಿರೀಕ್ಷಿತ ಚಿತ್ರ `ಬೀಸ್ಟ್’ನೊಂದಿಗೆ ತೆರೆಯ ಮೇಲೆ ಬರಲು ದಳಪತಿ ಸಿದ್ಧರಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

ಡಿಸೆಂಬರ್‌ನಲ್ಲಿ ಎಕ್ಸೈಟಿಂಗ್ ಪೋಸ್ಟರ್ ಬಿಡುಗಡೆ ಮಾಡಿದ್ದ ಬೀಸ್ಟ್ ಚಿತ್ರತಂಡವು ಏಪ್ರಿಲ್‍ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಈ ಸಿನಿಮಾ ಏಪ್ರಿಲ್ 2ನೇ ವಾರದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ವರದಿಯಾಗಿತ್ತು. ಕೇರಳದಲ್ಲಿ ಏ.14 ರಂದು ಹೊಸ ವರ್ಷ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 13ರಂದೇ ಚಿತ್ರತಂಡವು ಬೀಸ್ಟ್ ಅನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದೆ.

ಈಗಾಗಲೇ ಚಿತ್ರತಂಡವು ಬೀಸ್ಟ್ ಸಿನಿಮಾದ ಹೊಸ ಬಗೆಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

ಆದರೆ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರವು ಏಪ್ರಿಲ್ 14ರಂದು ತೆರೆಗೆ ಬರುತ್ತಿರುವುದು ಬೀಸ್ಟ್ ತಂಡಕ್ಕೆ ಭಾರಿ ಸವಾಲು ಎದುರಾಗಲಿದೆ ಎನ್ನುವುದೇ ಪ್ರಶ್ನೆಯಾಗಿದೆ.

Share This Article
Exit mobile version