Connect with us

Bengaluru City

SSLC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

Published

on

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಜೂನ್ 14 ರಿಂದ 25 ರವೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ವೇಳಾಪಟ್ಟಿ ಕುರಿತು ಆಕ್ಷೇಪಣೆ ಸಲ್ಲಿಸಬಹುದು.

ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
ಜೂ. 14 – ಪ್ರಥಮ ಭಾಷೆ
ಜೂ. 16 – ಕೋರ್ ಸಬ್ಜೆಕ್ಟ್, ಗಣಿತ
ಜೂ. 18 – ದ್ವಿತೀಯ ಭಾಷೆ
ಜೂ. 21 – ವಿಜ್ಞಾನ
ಜೂ. 23 – ತೃತೀಯ ಭಾಷೆ
ಜೂ. 25 – ಸಮಾಜ ವಿಜ್ಞಾನ

ಪ್ರಥಮ ಭಾಷೆ ಮತ್ತು ಕೋರ್ಸ್ ಸಬ್ಜೆಕ್ಟ್ ಗೆ 3.15 ಗಂಟೆ ಪರೀಕ್ಷೆ ಬರೆಯಲು ಸಮಯ ನೀಡಲಾಗುವುದು. ದ್ವೀತಿಯ ಮತ್ತು ತೃತೀಯ ಭಾಷೆಗೆ 3 ಗಂಟೆ ಸಮಯ ನೀಡಲಾಗುವದು ಎಂದು ಸಚಿವ ಸುರೇಶ್ ಕುಮಾರ ಹೇಳಿದ್ದಾರೆ. ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 26ವರೆಗೆ ಅವಕಾಶ ನೀಡಲಾಗಿದ್ದು, ಎಸ್‍ಎಸ್‍ಎಲ್‍ಸಿ ಬೋರ್ಡ್ ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

Click to comment

Leave a Reply

Your email address will not be published. Required fields are marked *