Belgaum
ರಾತ್ರೋರಾತ್ರಿ ದೇವಸ್ಥಾನ ಸೇರಿ ನಾಲ್ಕು ಮನೆ ದೋಚಿದ ಖದೀಮರು

– ದೇವಸ್ಥಾನದ 3 ತೊಲೆ ಚಿನ್ನ, ನಾಲ್ಕು ಕೆ.ಜಿ. ಬೆಳ್ಳಿ ಕಳ್ಳತನ
ಚಿಕ್ಕೋಡಿ/ಬೆಳಗಾವಿ: ದೇವಸ್ಥಾನ ಸೇರಿದಂತೆ ಖದೀಮರು ರಾತ್ರೋರಾತ್ರಿ ನಾಲ್ಕು ಮನೆ ದೋಚಿರುವ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ನಡೆದಿದೆ.
ದೇವಸ್ಥಾನದ 3 ತೊಲೆ ಚಿನ್ನ ಹಾಗೂ ನಾಲ್ಕು ಕೆ.ಜಿ. ಬೆಳ್ಳಿಯನ್ನು ಖದೀಮರು ದೋಚಿದ್ದಾರೆ. ಅಲ್ಲದೆ ಗ್ರಾಮದ ದಿಲೀಪ್ ತಳವಾರ, ಸಿದ್ದು ಪೂಜಾರ ಅವರ ಮನೆಯಲ್ಲೂ ಸಹ ಕಳ್ಳತನವಾಗಿದೆ. ಇದರಿಂದಾಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ರಾತೋರಾತ್ರಿ ದೇವಸ್ಥಾನ ಸೇರಿ ನಾಲ್ಕು ಮನೆ ದೋಚಲಾಗಿದ್ದು, ಗ್ರಾಮಗಳನ್ನೆ ಟಾರ್ಗೆಟ್ ಮಾಡಿ ಗ್ಯಾಂಗ್ ಕಳ್ಳತನ ನಡೆಸುತ್ತಿದೆ. ಕಾಳಿಕಾ ದೇವಸ್ಥಾನ ಸೇರಿ ಜ್ಯೂವೇಲರಿ ಶಾಪ್ ಹಾಗೂ ಮನೆಗಳಿಗೆ ಕನ್ನ ಹಾಕಲಾಗಿದೆ. ಇದರಿಂದ ಜಿಲ್ಲೆಯಲ್ಲಿ ದಿನೇ ದಿನೇ ಸರಣಿಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
