Tuesday, 21st January 2020

ಅನುಷ್ಕಾ ತೂಕದ ಬಗ್ಗೆ ವರದಿ ಮಾಡಿದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು

ಹೈದರಾಬಾದ್: ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ದಪ್ಪ ಆಗಿದ್ದಾರೆ ಎಂದು ವರದಿ ಮಾಡಿದ ತೆಲುಗು ವೆಬ್‍ಸೈಟ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

ಇತ್ತೀಚೆಗೆ ಅನುಷ್ಕಾ ಶೆಟ್ಟಿ ಅವರು ತಮ್ಮ ಮುಂಬರುವ ‘ನಿಶಾಬ್ದಂ’ ಚಿತ್ರದ ಶೂಟಿಂಗ್ ಮುಗಿಸಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ಈ ವೇಳೆ ಅಲ್ಲಿದ್ದ ಸ್ಥಳೀಯರು ಅನುಷ್ಕಾ ಅವರ ಫೋಟೋ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಈ ಫೋಟೋ ನೋಡಿ ತೆಲುಗು ವೆಬ್‍ಸೈಟ್ ಅನುಷ್ಕಾ ತೂಕದ ಬಗ್ಗೆ ವರದಿ ಮಾಡಿದೆ. ಅನುಷ್ಕಾ ಅವರು ‘ತುಂಬಾ ದಪ್ಪ’ ಆಗಿದ್ದಾರೆ ಹಾಗೂ ಅವರು ‘ಡಬಲ್ ಚಿನ್’ ಹೊಂದಿದ್ದಾರೆ ಎನ್ನುವ ಮಟ್ಟಕ್ಕೆ ವರದಿ ಮಾಡಿತ್ತು. ಈ ವರದಿ ನೋಡಿ ಅನುಷ್ಕಾ ಅಭಿಮಾನಿಗಳು ಗರಂ ಆಗಿದ್ದಾರೆ.

ಅನುಷ್ಕಾ ಬಗ್ಗೆ ವರದಿ ನೋಡಿ ಕೆಲವು ಅಭಿಮಾನಿಗಳು, “ಒಬ್ಬರು ದೈಹಿಕವಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ನೀವು ಅವರನ್ನು ಹೇಗೆ ವಿವರಿಸಬಹುದು? ನೀವು ಅವರ ಕಾಲ ಬೆರಳುಗಳಿಗೆ ಸಮವಲ್ಲ. ನೀವು ಮಾತನಾಡುವಾಗ ನಿಮ್ಮ ಬಾಯಿ ಹಾಗೂ ಟೈಪ್ ಮಾಡುವಾಗ ನಿಮ್ಮ ಕೈ ಸರಿಯಾಗಿ ಇರಲಿ. ನೀವು ಭಾರತದ ಮಹಿಳಾ ಸೂಪರ್ ಸ್ಟಾರ್ ರನ್ನು ನಿಂದಿಸಿದ್ದೀರಾ. ನೀವು ಈ ರೀತಿ ನಡೆದುಕೊಳ್ಳಬಾರದು” ಎಂದು ಕಮೆಂಟ್ ಮಾಡಿದ್ದಾರೆ.

2018ರಲ್ಲಿ ಬಿಡುಗಡೆಯಾದ ‘ಭಾಗಮತಿ’ ಚಿತ್ರದ ನಂತರ ಅನುಷ್ಕಾ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಸದ್ಯ ಅವರು ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ‘ಸೈರಾ ನರಸಿಂಹರೆಡ್ಡಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *