Monday, 17th February 2020

Recent News

ಅಪಘಾತವಾಗ್ತಿದ್ದಂತೆ ಕಾರು ಬಿಟ್ಟು ಯುವ ನಟ ಎಸ್ಕೇಪ್

– ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹೈದರಾಬಾದ್: ಟಾಲಿವುಡ್ ಯುವ ನಟ ರಾಜ್ ತರುಣ್ ಅವರ ಕಾರು ಆಗಸ್ಟ್ 20 ರಂದು ಅಪಘಾತಕ್ಕೆ ಒಳಗಾಗಿದ್ದು, ಈ ವೇಳೆ ಅಪಘಾತವಾಗುತ್ತಿದಂತೆ ನಟ ಸ್ಥಳದಿಂದ ಪರಾರಿಯಾಗಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ತರುಣ್ ರಾಜ್ ಅವರ ಕಾರು ಹೈದರಾಬಾದ್‍ನ ಅಲ್ಕಾಪುರ ಟೌನ್ ಶಿಪ್ ಬಳಿ ಡಿವೈಡರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಕಾರು ಚಲಾಯಿಸುತ್ತಿದ್ದ ನಟನಿಗೆ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಆದರೆ ಅಪಘಾತ ವೇಳೆಯ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ ಸಂದರ್ಭದಲ್ಲಿ ನಟ ತರುಣ್ ಕಾರನ್ನು ಬಿಟ್ಟು ಓಡಿ ಹೋಗುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ನೋಡುಗರಿಗೆ ಹಲವು ಅನುಮಾನ ಮೂಡಲು ಕಾರಣವಾಗಿತ್ತು.

ಘಟನೆ ಕುರಿತು ಸ್ಪಷ್ಟನೆ ನೀಡಿರುವ ತರುಣ್ ಅವರು, ನಾನು ಅಪಘಾತದ ಬಳಿಕ ಹೇಗಿದ್ದೇನೆ ಎಂಬುವುದನ್ನು ತಿಳಿದುಕೊಳ್ಳಲು ಹಲವರು ಫೋನ್ ಮಾಡುತ್ತಿದ್ದಾರೆ. ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದ. ನಾನು ಈ ಮಾರ್ಗವಾಗಿ ಕಳೆದ 3 ತಿಂಗಳಿನಿಂದ ಓಡಾಡುತ್ತಿದ್ದೇನೆ. ಕಾರು ಅಪಘಾತವಾದ ಸ್ಥಳದಲ್ಲಿ ಸಾಮಾನ್ಯವಾಗಿ ಅಪಘಾತಗಳು ನಡೆಯುತಿರುತ್ತವೆ. ಅಂದು ಕೂಡ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ಡಿವೈಡರಿಗೆ ಡಿಕ್ಕಿಯಾಗಿತ್ತು ಎಂದಿದ್ದಾರೆ.

ಅಪಘಾತ ನಡೆದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸಿದ್ದ ಪರಿಣಾಮ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ಭಾರೀ ಶಬ್ದ ಬಂದ ಹಿನ್ನೆಲೆಯಲ್ಲಿ ನಾನು ಕೊಂಚ ವಿಚಲಿತನಾಗಿದ್ದೆ. ಅಲ್ಲಿಂದ ನೆರ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದೇನೆ. ಶೀಘ್ರವೇ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತೇನೆ ಎಂದು ಟ್ವಿಟ್ಟರಿನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ಅಲ್ಲದೇ ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿ, ನಾನು ಮದ್ಯ ಸೇವಿಸಿ ಡ್ರೈವ್ ಮಾಡಿಲ್ಲ ಎಂದು ತಿಳಿಸಿ ರೂಮರ್‍ಗಳಿಗೆ ತೆರೆ ಎಳೆದಿದ್ದಾರೆ.

Leave a Reply

Your email address will not be published. Required fields are marked *