Connect with us

Cinema

ಅಪ್ಪನಾದ ‘ಅಗ್ನಿಸಾಕ್ಷಿ’ಯ ಸಿದ್ಧಾರ್ಥ್- ಮಗನ ವಿಡಿಯೋ ಹಂಚಿಕೊಂಡ ವಿಜಯ್

Published

on

ಬೆಂಗಳೂರು: ಕಿರುತೆರೆ ಖ್ಯಾತ ನಟ ವಿಜಯ್ ಸೂರ್ಯ ಗಂಡು ಮಗುವಿಗೆ ತಂದೆ ಆಗಿದ್ದಾರೆ. ಅಲ್ಲದೆ ಪತ್ನಿ ಹಾಗೂ ಮಗನ ಜೊತೆಗಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್ ತಮಗೆ ಗಂಡು ಮಗುವಾಗಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ ಫೆಬ್ರವರಿ 14ರಂದು ನಟ ವಿಜಯ್ ಸೂರ್ಯ ಅವರು ಚೈತ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚೈತ್ರಾ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ವಿಜಯ್ ಅವರ ದೂರದ ಸಂಬಂಧಿಯಾಗಿದ್ದರು.

ಇನ್‍ಸ್ಟಾದಲ್ಲಿ ವಿಡಿಯೋ ಹಾಕಿದ ವಿಜಯ್ ಅದಕ್ಕೆ, ಶುಭಾಶಯ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಾನು ಗಂಡು ಮಗುವಿಗೆ ತಂದೆ ಆಗಿದ್ದೇನೆ ಎಂದು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಜನವರಿ 1ರಂದು ನನ್ನ ಮಗ ಜನಿಸಿದ್ದಾನೆ. ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಅಮ್ಮ ಹುಡುಕಿದ ಹುಡುಗಿಯನ್ನೇ ವಿಜಯ್ ಮದುವೆಯಾಗಿದ್ದರು. ವಿಜಯ್ ‘ಅಗ್ನಿಸಾಕ್ಷಿ’ ನಂತರ ‘ಪ್ರೇಮಲೋಕ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಮಾತನಾಡಲಿದ್ದಾರೆ.