Thursday, 21st February 2019

Recent News

ಲವ್ವರ್ ತನ್ನನ್ನು ಮದ್ವೆಯಾಗ್ಬೇಕೆಂದು ಆಗ್ರಹಿಸಿ ಟವರ್ ಮೇಲೇರಿ ಕುಳಿತ ಮಹಿಳಾ ಟೆಕ್ಕಿ!

ಹೈದರಾಬಾದ್: ಲವ್ವರ್ ತನ್ನನ್ನು ಮದುವೆಯಾಗಬೇಕೆಂದು ಆಗ್ರಹಿಸಿ ಯುವತಿಯೊಬ್ಬಳು ಮೊಬೈಲ್ ಟವರ್ ಏರಿ ಕುಳಿತ ಘಟನೆ ತೆಂಲಗಾಣದಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರ ತೆಲಂಗಾಣದ ಯದಾದ್ರಿ ಭೊಂಗಿರ್ ಜಿಲ್ಲೆಯ ವಾಲಿಗೊಂಡ ಗ್ರಾಮದಲ್ಲಿ ನಡೆದಿದ್ದು, ಪೊಲೀಸರು ಮತ್ತು ಗ್ರಾಮಸ್ಥರು ಪರಿಪರಿಯಾಗಿ ಬೇಡಿಕೊಂಡ ಬಳಿಕ ಕೆಳಗಿಳಿದಿದ್ದಾಳೆ.

ಏನಿದು ಘಟನೆ?:
ಗ್ರಾಮದ ಜ್ಯೋತಿ ಮತ್ತು ಭಾಸ್ಕರ್ ಕಳೆದ 7 ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದರು. ಆದ್ರೆ ಇತ್ತೀಚೆಗೆ ಭಾಸ್ಕರ್, ಜ್ಯೋತಿಯನ್ನು ಕಡೆಗಣಿಸುತ್ತಿದ್ದನು. ಅಲ್ಲದೆ ಬೇರೊಬ್ಬಳ ಜೊತೆ ಸಂಬಂಧ ಬೆಳೆಸಿಕೊಂಡಿದ್ದ.

ಭಾಸ್ಕರ್ ವರ್ತನೆಯಿಂದ ಬೇಸತ್ತ ಜ್ಯೋತಿ ಹೈದರಾಬಾದ್ ನಲ್ಲಿರೋ ಸಾಫ್ಟ್ ವೇರ್ ಕಂಪೆನಿಯಲ್ಲಿನ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ಅಲ್ಲದೇ 40 ಅಡಿ ಎತ್ತರದ ಟವರ್ ಮೇಲೇರಿ ಕುಳಿತು ಬೆದರಿಕೆ ಹಾಕಿದ್ದಾಳೆ. ಒಂದು ವೇಳೆ ಭಾಸ್ಕರ್ ನನ್ನನ್ನು ಮದುವೆಯಾಗದಿದ್ದರೆ ಇಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಟವರಿನಿಂದ ಕೆಳಗಿಳಿಯುವಂತೆ ಪರಿಪರಿಯಾಗಿ ಬೇಡಿಕೊಂಡರು. ಇದೇ ವೇಳೆ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಗ್ರಾಮಸ್ಥರು ಮತ್ತು ಪೊಲೀಸರು ಟವರ್ ನ ಬುಡದಲ್ಲಿ ನಿಂತು ಬೇಡಿಕೊಂಡ ಬಳಿಕ ಅಂದ್ರೆ ಸುಮಾರು 3 ತಾಸಿನ ಬಳಿಕ ಯುವತಿ ಕೆಳಗಿಳಿದಿದ್ದು, ಸ್ಥಳದಲ್ಲಿದ್ದವರು ನಿಟ್ಟಿಸಿರು ಬಿಟ್ಟಿದ್ದಾರೆ. ಕೆಳಗಿಳಿದ ಯುವತಿ, ತನಗೆ ನ್ಯಾಯ ದೊರಕಿಸಿ ಕೊಡಬೇಕು. ತಾನು ಪ್ರೀತಿಸುತ್ತಿರೋ ಯುವಕ ಭಾಸ್ಕರ್ ಜೊತೆ ಮದುವೆ ಮಾಡಿಕೊಡುವಂತೆ ಮಾತು ಕೊಡಿ ಅಂತ ಬೇಡಿಕೆಯಿಟ್ಟಿದ್ದಾಳೆ. ಯಾಕಂದ್ರೆ ಆತ ಇನ್ನೊಬ್ಬಳ ಜೊತೆ ಸಂಬಂಧ ಹೊಂದಿದ್ದಾನೆ ಅಂತ ಆಕೆ ಪೊಲೀಸರ ಮುಂದೆ ಆರೋಪ ಮಾಡಿದ್ದಾಳೆ.

ಟವರ್ ಏರಿ ಕುಳಿತುಕೊಳ್ಳುವುದಕ್ಕೂ ಮೊದಲು ಜ್ಯೋತಿ 3 ದಿನಗಳ ಕಾಲ ಭಾಸ್ಕರ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಳು. ಯುವತಿಯ ಕಾಟದಿಂದ ಬೇಸತ್ತು ಅವರು ಮನೆಗೆ ಬೀಗ ಜಡಿದು ಗ್ರಾಮವನ್ನೇ ಬಿಟ್ಟು ಹೋಗಿದ್ದರು.

ಕಾಲೇಜು ಓದುತ್ತಿರುವ ಸಂದರ್ಭದಲ್ಲಿ ಜ್ಯೋತಿ ಹಾಗೂ ಭಾಸ್ಕರ್ ಮಧ್ಯೆ ಪ್ರೇಮಾಂಕುರವಾಗಿದೆ. ಭಾಸ್ಕರ್ ನನ್ನು ಮದುವೆ ಮಾಡಿಕೊಳ್ಳಲು ತಾನು ನನ್ನ ಕುಟುಂಬವನ್ನೂ ದೂರ ಮಾಡಿದ್ದೇನೆ ಅಂತ ಆಕೆ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.

Leave a Reply

Your email address will not be published. Required fields are marked *