Connect with us

Corona

ತೆಲಂಗಾಣ ಗೃಹ ಸಚಿವರಿಗೆ ಕೊರೊನಾ ಪಾಸಿಟಿವ್

Published

on

ಹೈದರಾಬಾದ್: ತೆಲಂಗಾಣದ ಗೃಹ ಸಚಿವ ಮಹಮ್ಮದ್ ಅಲಿ (67)ಗೆ ಕೊರೊನಾ ಸೋಂಕು ದೃಢವಾಗಿದೆ.

ಸಚಿವ ವರದಿ ಪಾಸಿಟಿವ್ ಬಂದ ಬೆನ್ನಲ್ಲೇ ಸಚಿವರನ್ನು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ದಿನಗಳ ಹಿಂದೆ ಗನ್‍ಮ್ಯಾನ್‍ಗಳಿಗೆ ಕೊರೊನಾ ಬಂದಿತ್ತು. ಹೀಗಾಗಿ ಸೋಂಕಿನ ಲಕ್ಷಣಗಳಿದ್ದ ಮಹಮ್ಮದ್ ಅಲಿ ಅವರಿಗೂ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವ ಅಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭಿಸಿದೆ.

 

ತೆಲಂಗಾಣದಲ್ಲಿ ಇದುವರೆಗೆ ಮೂವರು ಎಂಎಲ್‍ಎಗಳಿಗೆ ಸೋಂಕು ದೃಢವಾಗಿದೆ. ಕಳೆದ ಎರಡು ವಾರಗಳಿಂದ ತೆಲಂಗಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಸಿಎಂ ಕೆ ಚಂದ್ರಶೇಖರ್ ರಾವ್ ಕಠಿಣ ಲಾಕ್‍ಡೌನ್ ನಿಯಮಗಳನ್ನು ತರಲು ಮುಂದಾಗಿದ್ದಾರೆ. ತೆಲಂಗಾಣದಲ್ಲಿ ಕೊರೊನಾ ಪ್ರಕರಣ ಸಂಖ್ಯೆ 14,419ಕ್ಕೆ ಏರಿಕೆ ಆಗಿದ್ದು, ಇದುವರೆಗೂ 247 ಮಂದಿ ಸಾವನ್ನಪ್ಪಿದ್ದಾರೆ.