Thursday, 17th October 2019

Recent News

ಟಿಕ್‍ಟಾಕ್ ಮಾಡುವಾಗ ಗುಂಡು ತಗುಲಿ ಯುವಕ ಸಾವು

ಮುಂಬೈ: ಟಿಕ್‍ಟಾಕ್ ಮಾಡುವಾಗ ಗುಂಡು ತಗುಲಿ ಯುವಕ ಮೃತಪಟ್ಟ ಘಟನೆ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದಿದೆ.

ಪ್ರತೀಕ್ ಸಂತೋಷ್ ವಾಡೆಕರ್(19) ಮೃತಪಟ್ಟ ಯುವಕ. ಪ್ರತೀಕ್ ತನ್ನ ಸ್ನೇಹಿತರಾದ ಸನ್ನಿ ಪವಾರ್ ಹಾಗೂ ನಿತಿನ್ ಅಶೋಕ್ ವಾಡೆಕರ್ ಜೊತೆ ತನ್ನ ಅಂಕಲ್ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತೀಕ್ ಹತ್ತಿರದಲ್ಲಿಯೇ ಹೋಟೆಲ್ ಬುಕ್ ಮಾಡಿದ್ದನು. ಇದನ್ನೂ ಓದಿ: ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದ ಗೃಹಿಣಿ

ಹೋಟೆಲ್ ಬುಕ್ ಮಾಡಿ ರೂಮಿನಲ್ಲಿಯೇ ತನ್ನ ಸ್ನೇಹಿತರ ಜೊತೆ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದನು. ವಿಡಿಯೋ ಮಾಡುವಾಗ ಅವನ ಕೈಯಲ್ಲಿ ದೇಸಿ ಪಿಸ್ತೂಲ್ ಕೂಡ ಇತ್ತು. ಹೀಗಾಗಿ ವಿಡಿಯೋ ಮಾಡುವಾಗ ಆಕಸ್ಮಿಕವಾಗಿ ಪ್ರತೀಕ್ ಮೇಲೆ ಗುಂಡು ಹಾರಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪೋಷಕರಿಗೆ ಪತ್ರ ಬರೆದು, ಟಿಕ್‍ಟಾಕ್ ಗೆಳೆಯನ ಭೇಟಿಗೆ ಮನೆ ಬಿಟ್ಟ 14ರ ಪೋರಿ

ವಿಡಿಯೋ ಮಾಡುವಾಗ ಪ್ರತೀಕ್ ಸ್ನೇಹಿತ ಸನ್ನಿ ಕೈಯಲ್ಲಿ ಪಿಸ್ತೂಲ್ ಇತ್ತು. ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಸನ್ನಿ ಕೈಯಲ್ಲಿದ್ದ ಪಿಸ್ತೂಲ್‍ನಿಂದ ಆಕಸ್ಮಿಕವಾಗಿ ಬುಲೆಟ್ ಹೊರ ಬಂದು ಪ್ರತೀಕ್ ಎದೆಗೆ ತಾಗಿದೆ. ಪರಿಣಾಮ ಆತ ಅಲ್ಲಿಯೇ ಮೃತಪಟ್ಟಿದ್ದಾನೆ. ಪ್ರತೀಕ್ ಮೃತಪಟ್ಟಿದ್ದನ್ನು ನೋಡಿ ಸನ್ನಿ ಹಾಗೂ ನಿತಿನ್ ಸ್ಥಳದಿಂದ ಪರಾರಿಯಾಗಿದ್ದಾರೆ.

ಗುಂಡಿನ ಸದ್ದು ಕೇಳಿ ಹೋಟೆಲ್ ಸಿಬ್ಬಂದಿ ರೂಮಿಗೆ ತಲುಪಿದ್ದಾಗ ಪ್ರತೀಕ್ ಮೃತದೇಹ ಪತ್ತೆಯಾಗಿತ್ತು. ಬಳಿಕ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ನಿತಿನ್ ಹಾಗೂ ಸನ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *